ಬೆಳಗಾವಿ

ಸಕ್ಕರೆ ನಾಡಿನಲ್ಲಿ ಕುಟುಂಬ ರಾಜಕೀಯ

 ಶ್ರೀಶೈಲ ಮಠದ
ಬೆಳಗಾವಿ:  ಕುಟುಂಬ ರಾಜಕೀಯ ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿಯೂ ಪಾರುಪತ್ಯ ಮೆರೆದಿದೆ. ಸಕ್ಕರೆ ಕಾರ್ಖಾನೆಗಳ ಮೂಲಕವೇ ತಮ್ಮ ಕುಟುಂಬ ರಾಜಕೀಯವನ್ನು ಭದ್ರಪಡಿಸಿಕೊಂಡಿರುವವರಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬ ಸದ್ಯ ರಾಜಕೀಯ ಮೇಲುಗೈ ಸಾಧಿಸಿವೆ.
ಹುಕ್ಕೇರಿ ತಾಲೂಕು ಕತ್ತಿ ಕುಟುಂಬ ಹಾಗೂ ಗೋಕಾಕ ತಾಲೂಕು ಹಾಗೂ ಹುಕ್ಕೇರಿಯ ಅರ್ಧ ಭಾಗ ಜಾರಕಿಹೊಳಿ ಕುಟುಂಬದ ತೆಕ್ಕೆಯಲ್ಲಿವೆ. ಏನಿದ್ದರೂ ಇಲ್ಲಿ ಅವರದ್ದೇ ರಾಜಕೀಯ ನಡೆಯುತ್ತದೆ. ಅಲ್ಲದೇ, ಈ ಭಾಗದಲ್ಲಿ ಯಾವುದೇ ಪಕ್ಷ ಮುಖ್ಯವಲ್ಲ. ವೈಯಕ್ತಿಕ ವರ್ಚಸ್ಸೇ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ಇಲ್ಲಿ ಗಮನಾರ್ಹ.
ಬೆಳಗಾವಿ ಜಿಲ್ಲೆಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಾಗಿದ್ದ ಬಿ. ಶಂಕರಾನಂದ ಮತ್ತು ವಸಂತರಾವ್ ಪಾಟೀಲ ಅವರ ಕುಟುಂಬ ರಾಜಕೀಯ ರಾಜ್ಯದಲ್ಲಷ್ಟೇ ಅಲ್ಲದೇ ರಾಷ್ಟ್ರರಾಜಕಾರಣದಲ್ಲಿಯೂ ವಿಶೇಷ ಛಾಪು ಮೂಡಿಸಿತ್ತು. ಈ ಕುಟುಂಬ ಹೇಳಿದ್ದೇ ವೇದ ವಾಕ್ಯವಾಗಿತ್ತು.  ಆ ಮಟ್ಟಿಗೆ ಈ ಎರಡೂ ಕುಟುಂಬಗಳು ರಾಜಕೀಯದಲ್ಲಿ ಬೆಳೆದಿದ್ದವು. ಆದರೆ, ಅವರ ಪೀಳಿಗೆಗೆ ರಾಜಕೀಯ ಅದೃಷ್ಟ ಕೈಕೊಡುತ್ತಿದೆ. ಈ ಉಭಯ ನಾಯಕರ ಪುತ್ರರು, ಪುತ್ರಿಯರು ಒಂದು ಕಾಲದಲ್ಲಿ ರಾಜಕೀಯದಲ್ಲಿ ಒಂದು ಕೈ ನೋಡಿದವರೇ. ಆದರೆ,  ಇವರಲ್ಲೆ ಕೆಲವರು ಇತ್ತೀಚಿನ ಎರಡ್ಮೂರು  ಚುನಾವಣೆಗಳಲ್ಲಿ ರಾಜಕೀಯ ಅದೃಷ್ಟ ಪರೀಕ್ಷೆಗೆ ನಿಂತರೂ ವಿಜಯಲಕ್ಷ್ಮಿ ಮಾತ್ರ ಅವರಿಗೆ ಒಲಿಯುತ್ತಿಲ್ಲ. ಸಾಲು ಸಾಲಾಗಿ ಚುನಾವಣೆ ನಿಂತು ಸೋಲಿನ ಕಹಿಯನ್ನೇ ಅನುಭವಿಸಿದ್ದಾರೆ.  ಬದಲಾವಣೆ ಜಗದ ನಿಯಮ. ಹಿರಿಯ ಮುತ್ಸದ್ಧಿಗಳ ರಾಜಕೀಯ ತೆರೆಯ ಮೆರೆಗೆ ಸರಿಯುತ್ತಿದ್ದಂತೆಯೇ ಹೊಸ ತಲೆಮಾರುಗಳು ಕುಟುಂಬ ರಾಜಕೀಯಕ್ಕೆ ಧುಮುಕಿವೆ.
ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಹುಕ್ಕೇರಿಯ ಕತ್ತಿ ಹಾಗೂ ಗೋಕಾಕದ ಜಾರಕಿಹೊಳಿ ಕುಟುಂಬ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಕತ್ತಿ ಕುಟುಂಬ ರಾಜಕೀಯ:  ರಾಜಕೀಯ ಹಿನ್ನೆಲೆ ಹೊಂದಿರುವ ಕತ್ತಿ ಕುಟುಂಬ ಹುಕ್ಕೇರಿ ತಾಲೂಕಿನ ರಾಜಕೀಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಕುಟುಂಬಕ್ಕೆ ಪರ್ಯಾಯವಾಗಿ ಇನ್ನೊಂದು ಕುಟುಂಬ ರಾಜಕೀಯ ಹುಟ್ಟಿಲ್ಲ. ಈ ಕುಟುಂಬ ಸಕ್ಕರೆ ಕಾರ್ಖಾನೆಯಿಂದಲೇ ರಾಜಕೀಯಕ್ಕೆ ಧುಮ್ಮಿಕ್ಕಿದೆ. ಸದ್ಯ ತಮ್ಮ ಸ್ವ ಮಾಲಿಕತ್ವದ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದೆ.
  ಉಮೇಶ ಕತ್ತಿ ಸತತವಾಗಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗುತ್ತ ಬಂದಿದ್ದರೆ, ಅವರ ಸಹೋದರ ರಮೇಶ ಕತ್ತಿ ಚಿಕ್ಕೋಡಿ ಲೋಕಸಭೆ ಸದಸ್ಯರಾಗಿದ್ದಾರೆ. ಪ್ರಭಾವಿ ರಾಜಕೀಯ ನಾಯಕರಾಗಿಯೂ ಹೊರಹೊಮ್ಮಿದ್ದಾರೆ.
 ಇವರ ತಂದೆ ವಿಶ್ವನಾಥ ಕತ್ತಿ ಸಹ ಶಾಸಕರಾಗಿದ್ದರು. ಹಾಗೆ ನೋಡಿದರೆ ಈ ಕುಟುಂಬ ಯಾವುದೇ ಒಂದು ಪಕ್ಷಕ್ಕೆ ನಿಷ್ಠರಾಗಿಲ್ಲ. ಪ್ರತಿ ಬಾರಿಯೂ ಒಂದೊಂದು ಪಕ್ಷ ಬದಲಿಸುತ್ತಲೇ ಇದೆ. ಈ ಕುಟುಂಬಕ್ಕೆ ವೈಯಕ್ತಿಕ ವರ್ಚಸ್ಸೇ ಮುಖ್ಯವಾಗಿದೆ.
 1983ರವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದ ಹುಕ್ಕೇರಿ ಕ್ಷೇತ್ರ, ನಂತರ ಯಾವುದೇ ಪಕ್ಷದ ಭದ್ರಕೋಟೆ ಆಗದೇ ಕತ್ತಿ ಕುಟುಂಬ ಇರುವ ಪಕ್ಷಕ್ಕೆ ಒಲಿಯುತ್ತ ಬಂದಿದೆ.
ಜಾರಕಿಹೊಳಿ ಕುಟುಂಬ ರಾಜಕೀಯ:  ಜಾರಕಿಹೊಳಿ ಕುಟುಂಬದ ಇಬ್ಬರು ಸಹೋದರರಾದ ಸತೀಶ ಜಾರಕಿಹೊಳಿ (ಯಮಕನಮರಡಿ), ರಮೇಶ ಜಾರಕಿಹೊಳಿ (ಗೋಕಾಕ) ಕಾಂಗ್ರೆಸ್ನಿಂದ ಹಾಗೂ ಬಾಲಚಂದ್ರ ಜಾರಕಿಹೊಳಿ (ಅರಬಾವಿ) ಬಿಜೆಪಿಯಿಂದ ವಿಧಾನಸಭೆ ಸದಸ್ಯರಾಗಿದ್ದಾರೆ.
 ಡಾ.ಭೀಮಶಿ ಜಾರಕಿಹೊಳಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲಖನ್ ಜಾರಕಿಹೊಳಿ ಗೋಕಾಕದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದಾರೆ. ಒಡಹುಟ್ಟಿದವರಾಗಿದ್ದರೂ ರಾಜಕೀಯವಾಗಿ ಪರಸ್ಪರರ ವಿರುದ್ಧ ಮುಖ ಮಾಡಿದ್ದಾರೆ ಜಾರಕಿಹೊಳಿ ಸಹೋದರರು. ಅಪ್ಪ-ಅಮ್ಮನ ನಂತರ ಪುತ್ರ:  ರಾಜಕೀಯದಲ್ಲಿ ಹೊಸ ಕುಡಿಗಳು ಹುಟ್ಟಿಕೊಳ್ಳುವುದು ಕೇವಲ ಕುಟುಂಬ ನಾಮ ಬಲದಿಂದ. ಇಲ್ಲಿ ಹೊಸ ಕುಡಿಗಳಿಗೆ ಪರಿಶ್ರಮದ ಅರಿವಿರುವುದಿಲ್ಲ. ಅಪ್ಪ- ಅಮ್ಮನ ಹೆಸರಲ್ಲೇ ರಾಜಕೀಯದ ಮೆಟ್ಟಿಲೇರುತ್ತಾರೆ.  ಈ  ಕುಟುಂಬ ಸಾಲಿಗೆ ರಾಮದುರ್ಗದ ಪಟ್ಟಣ ಕುಟುಂಬ ಸೇರ್ಪಡೆಯಾಗುತ್ತದೆ.    ಅಪ್ಪ- ಅಮ್ಮ ಪ್ರತಿನಿಧಿಸಿರುವ ಕ್ಷೇತ್ರವನ್ನೇ ಪುತ್ರ ಪ್ರತಿನಿಧಿಸುತ್ತಿರುವುದು ವಿಶೇಷ. 1957ರಲ್ಲಿ ಎಂ.ಎಸ್. ಪಟ್ಟಣ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರೆ, 1967ರಲ್ಲಿ ಶಾರದವ್ವ ಪಟ್ಟಣ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು.     2008ರ ಚುನಾವಣೆಯಲ್ಲಿ ಇವರ ಪುತ್ರ ಅಶೋಕ ಪಟ್ಟಣ ಚುನಾಯಿತಗೊಂಡಿದ್ದಾರೆ. ಈಗ ಮರುಆಯ್ಕೆಬಯಿಸಿ ಚುನಾವಣಾ ಕಣಕ್ಕಿಳಿಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!