ಬೆಳಗಾವಿ

ಆರಾಧನಾ ಮಹಾಮಹೋತ್ಸವ ಮುಕ್ತಾಯ

ಬಡಕುಂದ್ರಿ: ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಕುಂಥುನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ದಶ ವರ್ಷೋತ್ಸವದ ನಿಮಿತ್ತ ಏ.18ರಿಂದ 22ರವರೆಗೆ ಐದು ದಿನಗಳ ಕಾಲ ನಡೆದ ಶ್ರೀಧರ್ಮಚಕ್ರ ಆರಾಧನಾ ಮಹಾಮಹೋತ್ಸವ ಮಂಗಳವಾರ ಮಂಗಲಗೊಂಡಿತು.
ಸಾನ್ನಿಧ್ಯ ವಹಿಸಿದ್ದ ನಿಶ್ಚಂುಸಾಗರ ಮುನಿಮಹಾರಾಜರು ಆಶೀರ್ವಚನ ನೀಡಿ, ಮಾನವ ಜೀವಿ ಸಂಸಾರ ಎಂಬ ಜೀವನ ಚಕ್ರದಲ್ಲಿ ಅನುಭವಿಸುವ ಸುಖ, ದು:ಖಗಳು ಕ್ಷಣಿಕವಾಗಿದ್ದು, ಪ್ರತಿಂೊಬ್ಬರೂ ಜೀವನದಲ್ಲಿ ಪರಮಸುಖದಿಂದ ಮುಕ್ತಿ ಪಡೆಂುಲು ಶ್ರೀಧರ್ಮಚಕ್ರ ಆರಾಧನಾ ಮಹೋತ್ಸವ ಕಾಂರ್ುಕ್ರಮದ ಉದ್ದೇಶವಾಗಿದೆ ಎಂದರು. ಈ ಮಹಾಮಹೋತ್ಸವದಿಂದ ದೇಶದ ಸಕಲ ಜೀವಿಗಳಿಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಪ್ರಾಪ್ತವಾಗಲೆಂದು ಹಾರೈಸಿದರು.
ಮುಕ್ತಿಸಾಗರ ಮುನಿಮಹಾರಾಜರು ಮಾತನಾಡಿ, ಬಾಹ್ಯ ಸುಖದಿಂದ ಮಾನವ ಜೀವ ಮುಕ್ತಿ ಹೊಂದಿ ಆತ್ಮ ಕಲ್ಯಾಣಗೊಳಿಸಿಕೊಳ್ಳುವುದೇ ಶ್ರೀಧರ್ಮಚಕ್ರ ಆರಾಧನಾ ಮಹೋತ್ಸವ ಮುಖ್ಯ ಧ್ಯೇಂುವಾಗಿದೆ ಎಂದರು.
ನಾಂದಣಿಮಠದ ಜಿನಸೇನ ಭಟ್ಟಾರಕ ಪಟ್ಟಾಚಾಂರ್ು ಸ್ವಾಮೀಜಿ ಹಾಗೂ ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾಂರ್ು ಸ್ವಾಮೀಜಿ ಹಾಗೂ ಜ್ಞಾನಮತಿ ಮಾತಾಜಿ ಅವರ ಆಶೀರ್ವಚನ ನೀಡಿದರು.
ಐದು ದಿನಗಳ ಕಾಲ ಮಂಗಲವಾಧ್ಯ ಘೋಷಣೆ, ಂುಜಮಾನರ ನೇತೃತ್ವದಲ್ಲಿ ಆನೆಂು ಮೇಲಿಂದ ಮಂಗಲ ಕಳಶದ ಮೆರವಣಿಗೆ, ಇಂದ್ರ ಪ್ರತಿಷ್ಠೆ, ಕಂಕಣಬಂಧನ, ಪಂಚಾಮೃತ ಅಭಿಷೇಕ, ಧ್ವಜಾರೋಹಣ, ಮಂಟಪ ವೇದಿ ಪ್ರತಿಷ್ಠೆ, ಪ್ರವಚನ, ಸವಾಲ, ಅಂಕುರಾರೋಪಣ, ಶಾಂತಿಹೋಮ, ಆಚಾಂರ್ು ಶಾಂತಿಸಾಗರ ಮಹಾರಾಜರ ಭಾವಚಿತ್ರದ ಮೆರವಣಿಗೆ, ನೂರಾರು ಜನ ಮಕ್ಕಳಿಗೆ ಮೌಂಜಿ ಬಂಧನ ಸಂಸ್ಕಾರ, ಜಿನವಾಣಿ ಶಾಸ್ತ್ತ್ರದ ಮೆರವಣಿಗೆ, 1008 ಕಲಶಗಳಿಂದ ಮಹಾಭಿಷೇಕ ಸಂಘ ಪೂಜೆ, ಸತ್ಕಾರ ಹಾಗೂ ಪೂಜ್ಯರಿಂದ ಆಶೀರ್ವಚನ, ಭಜನೆ, ಕೀರ್ತನೆ, ಸಂಗೀತ ಆರತಿ, ಸಾಂಸ್ಕೃತಿಕ ಕಾಂರ್ುಕ್ರಮಗಳು ಹಾಗೂ ಪೂಜಾ ವಿಧಿವಿಧಾನಗಳು ಜರುಗಿದವು. ವಿಹಾರ ರಥೋತ್ಸವದಲ್ಲಿ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಂು ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆನೆ, ಕುದುರೆ ಹಾಗೂ ಸಕಲ ವಾಧ್ಯಮೇಳದೊಂದಿಗೆ ವಿಜೃಂಭಣೆಯಿಂದ ನಡೆಯಿತು
ಉಗಾರ ಬಿ.ಕೆ. ಗ್ರಾಮದ ಜೈಜಿನೇಂದ್ರ ಕಲಾಮಂಚದ ವಿಫುಲ ಹವಲೆ ಹಾಗೂ ಸಂಗಡಿಗರಿಂದ ಪ್ರತಿನಿತ್ಯ ಸಂಗೀತ ಸೇವೆ ಜರುಗಿತು. ಕಾಂರ್ುಕ್ರಮದಲ್ಲಿ ಸಹಸ್ರಾರು ಜನ ಶ್ರಾವಕ-ಶ್ರಾವಕಿಂುರು ಪಾಲ್ಗೊಂಡಿದ್ದರು.
ಮಾನವ ಜೀವಿ ಸಂಸಾರ ಎಂಬ ಜೀವನ ಚಕ್ರದಲ್ಲಿ ಅನುಭವಿಸುವ ಸುಖ, ದು:ಖಗಳು ಕ್ಷಣಿಕವಾಗಿದ್ದು, ಪ್ರತಿಂೊಬ್ಬರೂ ಜೀವನದಲ್ಲಿ ಪರಮಸುಖದಿಂದ ಮುಕ್ತಿ ಪಡೆಂುಲು ಶ್ರೀಧರ್ಮಚಕ್ರ ಆರಾಧನಾ ಮಹೋತ್ಸವ ಕಾಂರ್ುಕ್ರಮದ ಉದ್ದೇಶ.
- ನಿಶ್ಚಂುಸಾಗರ ಮುನಿಮಹಾರಾಜರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!