ಬೆಳಗಾವಿ: ಕಾನೂನು ಸಾಕ್ಷರತಾ ನಿಮಿತ್ತ ಕಾನೂನು ರಥಕ್ಕೆ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ. ಕೃಷ್ಣಭಟ್ ಅವರು ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ 10 ತಾಲೂಕುಗಳಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಲು ಕಾನೂನು ರಥವು ಏ. 25 ರಿಂದ ಮೇ 30ರವರೆಗೆ ಸಂಚರಿಸಿ ಪ್ರತಿನಿತ್ಯ 3 ಕಾನೂನುಸಾಕ್ಷರತಾ ಕಾರ್ಯಕ್ರಮಗಳನ್ನು ಮೂರು ದಿನ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿನಯ ಮಾಂಗಳೇಕರ, ಉಪಾಧ್ಯಕ್ಷ ಆರ್.ಸಿ. ಪಾಟೀಲ ಮೊದಲಾದವರು ಇದ್ದರು