ಬೆಳಗಾವಿ: ಜನಪ್ರತಿನಿಧಿಗಳ ನೇತೃತ್ವದಲ್ಲಿ ಕರ್ನಾಟಕದ ಗಡಿಯೊಳಕ್ಕೆ ನುಗ್ಗುವ ಮರಾಠಿಗರ ಪ್ರಯತ್ನವನ್ನು ಭಾನುವಾರ ಪೊಲೀಸರು ವಿಫಲಗೊಳಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಗಡಿಯಂಚಿನಲ್ಲಿರುವ ಕುನೊಳ್ಳಿ ನಾಕಾ ಬಳಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಹಾಗೂ ಶಿವಸೇನೆಯ 3500ಕ್ಕೂ ಕಾರ್ಯಕರ್ತರು ರಾಜ್ಯದೊಳಗೆ ನುಗ್ಗಲು ಯತ್ನ್ನಿಸಿದಾಗ ಪೊಲೀಸರು ಹಿಮ್ಮೆಟ್ಟಿಸಿದರು. ಆದರೂ ಉದ್ರಿಕ್ತಗೊಂಡ ಗುಂಪೊಂದು ಪುಣೆಯಿಂದ ಬೆಳಗಾವಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ಹೊಡೆಯಿತು.
ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಸನ್ ಮುಷರಫ್, ಸಂಸದ ಧನಂಜಯ ಮಾಡಿಕ್, ಚಂದಗಡ ಶಾಸಕಿ ಸಂಧ್ಯಾದೇವಿ ಕುಪೇಕರ, ಶಾಸಕಿ ವಿದ್ಯಾ ಚವ್ಹಾಣ, ಮಾಜಿ ಸಂಸದೆ ನಿವೇದಿತಾ ಮಾನೆ ಹಾಗೂ ಕೆ.ಪಿ.ಪಾಟೀಲ ನೇತೃತ್ವ ವಹಿಸಿದ್ದರು.
ಸಹಜ ಸ್ಥಿತಿಯತ್ತ ಯಳ್ಳೂರ: ಯಳ್ಳೂರ ಗ್ರಾಮ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಆ.10ರವರೆಗೆ ಬಂದೋಬಸ್ತ್ ಮುಂದುವರಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮರಾಠಿ ನಾಮಫಲಕದ ರಿಟ್ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ.