ಬೆಳಗಾವಿ: ಯಳ್ಳೂರ ಗ್ರಾಮದ ಹೊರವಲಯದ ವಿವಾದಾತ್ಮಕ, ಅಕ್ರಮ “ÈÚßÔÛÁÛÎÚoñ ÁÛdÀ’ ಎಂಬ ಮರಾಠಿ ನಾಮಫಲಕಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯೇ ಅಹೋರಾತ್ರಿ ಸಂರಕ್ಷಣೆ ನೀಡುತ್ತಿದೆ! ಜಿಲ್ಲಾಡಳಿತ ಈ ಅಕ್ರಮ ಫಲಕ ತೆರವುಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಎಂಇಎಸ್ ಗಡಿ, ಭಾಷಾ ವಿಚಾರ ಕೈಬಿಟ್ಟು ಈಗ ಯಳ್ಳೂರಿನ ಫಲಕದ ಮೂಲಕ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಯಳ್ಳೂರು ಸೇರಿ ಸುತ್ತಮುತ್ತಲ ಮರಾಠಿ ಭಾಷಿಕರನ್ನು ಕೆರಳಿಸಿ, ಪ್ರಚೋದಿಸುವ ದುಸ್ಸಾಹಸಕ್ಕೆ ಯತ್ನಿಸುತ್ತಿದೆ. ತಾಕತ್ತಿದ್ದರೆ ಮಹಾರಾಷ್ಟ್ರ ರಾಜ್ಯ ಫಲಕಕ್ಕೆ ಕೈ ಹಚ್ಚಲಿ ಎಂದೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಕನ್ನಡಪರ ಸಂಘಟನೆಗಳಿಗೆ ಸವಾಲು ಹಾಕುತ್ತಿದೆ. ಜಿಲ್ಲಾಡಳಿತ ಅಕ್ರಮ ಫಲಕ ತೆರವಿಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ. ಈ ಮಧ್ಯೆ ಅಕ್ರಮ ಫಲಕಕ್ಕೆ ಪೊಲೀಸ್ ಇಲಾಖೆ ಅಹೋರಾತ್ರಿ ಸಂರಕ್ಷಣೆ ನೀಡುತ್ತಿದೆ. ಯಳ್ಳೂರಿನ ಅಕ್ರಮ ಫಲಕ ತೆರವುಗೊಳಿಸುವ ಸಂಬಂಧ ತಮಗೆ ನ್ಯಾಯಾಲಯ ಅಥವಾ ಸರ್ಕಾರದ ಆದೇಶ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ನಿರ್ಣಯ ತೆಗೆದುಕೊಂಡು ತೆರವುಗೊಳಿಸಲು ಬಂದರೆ ಪೊಲೀಸ್ ಬಂದೋಬಸ್ತ್ ನೀಡಲಾಗುವುದು ಜಿಲ್ಲಾ ಪೊಲೀಸ್ ಇಲಾಖೆಯೇ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಪತ್ರ ಬರೆದು ಸ್ಪಷ್ಟಪಡಿಸಿದೆ. ಈಗ ಅಕ್ರಮ ಫಲಕಕ್ಕೆ ಪೊಲೀಸ್ ಇಲಾಖೆ ಅಹೋರಾತ್ರಿ ರಕ್ಷಣೆ ನೀಡುತ್ತಿರುವುದು ವಿಪರ್ಯಾಸ.