ರಾಂುಬಾಗ: ಯೋಗಗುರು ರಾಮದೇವ ಹೇಳಿಕೆ ಖಂಡಿಸಿದ ರಾಯಬಾಗದ ದಲಿತ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಮಂಗಳವಾರ ಬಾಬಾ ಅವರ ಪ್ರತಿಕೃತಿ ದಹಿಸಿ, ಪ್ರತಿಭಟಿಸಿತು.
ಂೋಗಗುರು ರಾಮದೇವ ಬಾಬಾ ರಾಜಕಾರಣಿಗಳನ್ನು ಟೀಕಿಸುವ ಭರದಲ್ಲಿ ದಲಿತರನ್ನು ಅವಮಾನಿಸಿದ್ದಾರೆ. ಇಂಥವರನ್ನು ತಕ್ಷಣ ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿ, ತಹಸೀಲ್ದಾರ್ ಶಿವಾನಂದ ಸಾಗರ ಅವರಿಗೆ ಮನವಿ ಸಲ್ಲಿಸಿದರು.
ಬೆಳಗ್ಗೆ ಅಂಬೆಡ್ಕರ್ ಸರ್ಕಲ್‌ದಿಂದ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡು ಪಟ್ಟಣದ ಝೆಂಡಾ ಕಟ್ಟಿ ಹತ್ತಿರ ಬಂದು ರಾಮದೇವ ಬಾಬಾ ವಿರುದ್ಧ ಘೋಷಣೆ ಕೂಗುತ್ತಾ ಅವರ ಪ್ರತಿಕೃತಿ ದಹಿಸಲಾಯಿತು. ನಂತರ ಹಳೆ ತಹಸೀಲ್ದಾರ್ ಕಚೇರಿ ವರೆಗೆ ಬಂದು ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಂುಲ್ಲಿ ದಲಿತ ಸಂಘಟನೆಗಳ ಮುಖಂಡರಾದ ರಾಜು ತಳವಾರ, ಗಣೇಶ ಕಾಂಬಳೆ, ಮಹಾವೀರ ಐಹೊಳೆ, ವಿವೇಕ ಘಾಟಗೆ, ನಾಮದೇವ ಕಾಂಬಳೆ, ಜ್ಯೋತಿಬಾ ಚಾಂಬಾರ, ರಾಜು ಕಾಂಬಳೆ, ಅಜೀತ ಬುರಡ, ಲೋಕೇಶ ಕಾಂಬಳೆ, ಚಂದು ಬುರಡ, ತ್ಯಾಗರಾಜ ಕದಮ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಚನ್ನಮ್ಮನ ಕಿತ್ತೂರು: ಂೋಗಗುರು ರಾಮದೇವ ಬಾಬಾ ದಲಿತರ ಬಗ್ಗೆ ಅವಹೇಳಕಾರಿ ಮಾತಾಡಿದ್ದನ್ನು ಖಂಡಿಸಿದ ದಲಿತ ಸಂಘರ್ಷ ಸಮಿತಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟಿಸಿತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ರಾಮದೇವ ಬಾಬಾ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟಿಸಲಾಯಿತು. ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ವಿಶೇಷ ತಹಸೀಲ್ದಾರ್ ಕಚೇರಿ ತಲುಪಿ ಅಲ್ಲಿ ಬಾಬಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ವಿಶೇಷ ತಹಸೀಲ್ದಾರ್ ಎಸ್.ಟಿ. ಯಂಪುರೆ ಅವರಿಗೆ ಮನವಿ ಸಲ್ಲಿಸಲಾಯಿತು. ದಲಿತ ಮುಖಂಡ ಸಂಜೀವ ಲೋಕಾಪುರ, ದಲಿತ ಸಂಘರ್ಷ ಸಮಿತಿಂು ರಮೇಶ ರಾಂುಪ್ಪಗೋಳ, ರಾಜು ಜಾಂಗಟಿ, ಫಕ್ಕೀರಪ್ಪ ಜಾಂಗಟಿ, ಗಂಗಾಧರ ಹಂಚಿನಮನಿ, ಎನ್.ಕೆ. ಚಿನ್ನಣ್ಣವರ, ಎಸ್.ಎಂ. ಕೋಲಕಾರ, ರಮೇಶ ಹಂಚಿನಮನಿ, ನ್ಯಾಂುವಾದಿ ಮೋಹನ ಹಂಚಿನಮನಿ ಅನೇಕರಿದ್ದರು.
ಮುನವಳ್ಳಿ: ಂೋಗ ಗುರು ರಾಮದೇವ ಬಾಬಾ ದಲಿತರ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸಮೀಪದ ಯರಗಟ್ಟಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟಿಸಿದರು.
ಮಾನವ ಸರಪಳಿ ರಚಿಸಿ, ರಸ್ತೆ ಸಂಚಾರ ಬಂದ್ ಮಾಡಿ ರಾಮದೇವ ಪ್ರತಿಕೃತಿ ದಹಿಸಿ ಪ್ರತಿಟಿಸಿದರು. ರಾಮದೇವ ವಿರುದ್ಧ ಘೋಷಣೆ ಕೂಗಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಪ್ರತಿಭಟಿಸುವುದಾಗಿಯೂ ಎಚ್ಚರಿಸಲಾಯಿತು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾಂರ್ುದರ್ಶಿ ಪಂಚನಗೌಡ ದ್ಯಾಮನಗೌಡ್ರ, ದಲಿತ ಮುಖಂಡ ರಮೇಶ ಮಾದರ, ಎಚ್.ಎಸ್. ಗಂಗರಡ್ಡಿ, ಬಸವರಾಜ ಪೂಜೇರ, ದಲಿತ ಮುಖಂಡ ವಿಲ್ಸನ್ ಸೊಪ್ಪಡ್ಲ, ಡಿಎಸ್‌ಎಸ್ ಮಹಿಳಾ ಸಂಚಾಲಕಿ ಸುಧಾ ಮರಕುಂಬಿ, ಲಕ್ಕಪ್ಪ ಹುಣಶಿಕಟ್ಟಿ, ಸುರೇಶ ಮುರಗೋಡ, ಂುಲ್ಲಪ್ಪ ಪುಟ್ಟಪ್ಪನವರ, ಸಂಜು ಚನ್ನಮೇತ್ರಿ, ಫಕೀರಪ್ಪ ಚನ್ನಮೇತ್ರಿ, ಪ್ರಕಾಶ ಚನ್ನಮೇತ್ರಿ, ಬಸವರಾಜ ಚನ್ನಮೇತ್ರಿ, ನಾಗಪ್ಪ ಚನ್ನಮೇತ್ರಿ, ಗಿರೀಶ ದೇವರಡ್ಡಿ, ಮಂಜುನಾಥ ತಡಸಲೂರ, ಡಿ.ಕೆ. ರಫೀಕ, ನಾರಾಂುಣ ಪಾಟೀಲ ಇತರರಿದ್ದರು.