ಕೋಳಿಗುಡ್ಡ: ಜಾನಪದ ಸಾಹಿತ್ಯ ಶ್ರೀಮಂತವಾದದು. ಜಾನಪದ ಹಾಡು ಕಟ್ಟುವವರು ತಮ್ಮ ಜೀವನವನ್ನು ನಿಸರ್ಗದೊಂದಿಗೆ ಕಳೆಂುತ್ತಿದ್ದರು. ಅವರ ಜಾನಪದದ ಕಾಂುಕ ಂೋಗಿಗಳಾಗಿದ್ದರು ಎಂದು ಪ್ರಾಚಾಂರ್ು ಟಿ.ಎಸ್.ವಂಟಗೂಡಿ ಅಭಿಪ್ರಾಯಪಟ್ಟರು.
ಮೂಡಲಗಿಂು ಚೈತನ್ಯ ಆಶ್ರಮ ವಸತಿ ಶಾಲೆಂುಲ್ಲಿ ನಡೆದ ಮಕ್ಕಳ ಪ್ರತಿಭಾ ವಿಕಾಸ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನೇಗಿಲು, ಹಂತಿ ಕಟ್ಟುವಾಗ, ಬೀಸುವಾಗ ತಮ್ಮ ಭಾವನೆಗಳನ್ನು ಹಾಡಿನ ಮೂಲಕ ಜನರು ಹಾಡನ್ನು ಹೊರ ಹಾಕುತ್ತಿದ್ದರು. ಇದೇ ಮುಂದೆ ಜಾನಪದವಾಗಿ ಮಾರ್ಪಟ್ಟಿತು ಎಂದರು.
ಈ ನಾಡಿನ ಜನರು, ಅದರಲ್ಲೂ ಯುವಕರು ಜಾನಪದ ಸಾಹಿತ್ಯ ಸಂಸ್ಕೃತಿ, ಕಲೆಂುನ್ನು ಉಳಿಸಿ ಬೆಳಸಬೇಕೆಂದು ಕಿವಿಮಾತು ಹೇಳಿದರು.
ಮಕ್ಕಳ ಸಾಹಿತಿ ಎಲ್.ಎಸ್. ಚೌರಿ ಅಧ್ಯಕ್ಷತೆ ವಹಿಸಿದ್ದರು. ಜಂಾನಂದ ಮಾದರ, ಬಿ.ಎಲ್. ಘಂಟಿ, ಎಸ್.ಎಂ. ಹೂಗಾರ ಉಪಸ್ಥಿತರಿದ್ದರು. ಸಾಹಿತಿ ಎಸ್.ಡಿ. ರಾಂುಮಾನೆ ಸ್ವಾಗತಿಸಿದರು. ಶಿವಾನಂದ ಹಿರೇಮಠ ವಂದಿಸಿದರು.