ಬೆಳಗಾವಿ

ಮರಳು ಮಾಫಿಯಾ ದಂಧೆಗೆ ಕೊನೆ ಎಂದು?

 ಎಂ.ವಿ. ಕರಾಕಾಯಿ
ರಾಂುಬಾಗ: ನಿಷೇಧಿತ ಕೃಷ್ಣಾ ನದಿಯ ಒಡಲನ್ನು ಅಗೆದು ಬರಿದು ಮಾಡುತ್ತಿರುವ, ಅಕ್ರಮವಾಗಿ ನಡೆಸುತ್ತಿರುವ ಮರಳು ಮಾಫಿಯಾ ದಂಧೆಗೆ ಕೊನೆ ಎಂದು...?
ನದಿಯಲ್ಲಿ ನೀರು ಕಡಿಮೆಯಾಗುತ್ತಿರುವುದನ್ನೇ ಕಾಯ್ದು ಕುಳಿತ ಕುಡಚಿ, ಬಾವನ ಸೌಂದತ್ತಿ, ಮಾಂಜರಿ ಸೇರಿದಂತೆ ನದಿ ಪಾತ್ರದ ಇತರ ಗ್ರಾಮಗಳಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುವ ದಂಧೆ ಅವಿರತವಾಗಿ ನಡೆದಿದೆ. ಈ ಗ್ರಾಮಗಳಲ್ಲಿ ರಾತ್ರಿ ಹಗಲೆನ್ನದೆ ದಿನದ 24 ಗಂಟೆಯೂ ನದಿ ಒಡಲಿನಿಂದ ಕಳೆದ ಒಂದೂವರೆ ತಿಂಗಳಿನಿಂದ ಮರಳು ತೆಗೆಯಲಾಗುತ್ತಿದೆ. ಹಗಲು ಹೊತ್ತಿನಲ್ಲಿ ಚಕ್ಕಡಿಯಲ್ಲಿ ಮರಳು ಸಾಗಿಸಿದರೆ, ರಾತ್ರಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸಲಾಗುತ್ತಿದೆ. ಈ ರೀತಿ ಸಾಕಷ್ಟು ಪ್ರಮಾಣದಲ್ಲಿ ಮರಳು ದಾಸ್ತಾನು ಮಾಡಲಾಗಿದೆ.
ಈ ದಂಧೆಯನ್ನು ನೋಡಿಯೂ ನೋಡದಂತಿರುವ ಕಂದಾಂು, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಜನರು ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ. ನದಿ ಪಾತ್ರದಲ್ಲಿ ಮರಳು ಸಂಗ್ರಹವಿದ್ದರೆ ನೀರಿನ ಶೇಖರಣೆಂಾಗುತ್ತದೆ. ಇಲ್ಲದಿದ್ದರೆ ನೀರು ಶೇಖರಣೆಯಾಗುವುದಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ.
ಸೇತುವೆಗೆ ಅಪಾಯ: ಇಷ್ಟೇ ಅಲ್ಲದೇ ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಿದ ಕೃಷ್ಣಾ ನದಿಗೆ ಅಡ್ಡಲಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ-ಉಗಾರ ಸೇತುವೆ ಕೆಳಗೆ ಮರಳು ತೆಗೆಂುಬಾರದು ಎಂದು ಸರ್ಕಾರದ ಆದೇಶವಿದೆ. ಆದರೂ ಕುಡಚಿ ಬ್ರಿಜ್ ಕೆಳಗಡೆ ಮರಳನ್ನು ನಿರಾತಂಕವಾಗಿ ತೆಗೆಯಲಾಗುತ್ತಿದೆ. ಇದರಿಂದ ಸೇತುವೆಗೆ ಮುಂದಿನ ದಿನಗಳಲ್ಲಿ ಅಪಾಯ ಉಂಟಾಗಬಹುದಾದ ಆತಂಕವಿದೆ ಎಂದು ತಜ್ಞರು ಹೇಳುತ್ತಾರೆ. ಸಂಬಂಧಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಇದನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ. ಕುಡಚಿ ಸೇತುವೆ ಸಮೀಪ ರಾಯಬಾಗ ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಜಾಕವೇಲ್ ಕೂಡ ಇದೆ. ಇಲ್ಲಿ ಮರಳು ತೆಗೆಂುವ ಸಲುವಾಗಿ ವಾಹನ ಒಡಾಡಿ ವಾಹನಗಳ ಆಯಿಲ್ ಅಲ್ಲೇ ಸೋರಿಕೆಯಾಗಿ, ಅದು ನೀರಿನಲ್ಲಿ ಬೆರೆಯುವುದರಿಂದ ನೀರು ಕಲ್ಮಶಗೊಂಡು ಪಟ್ಟಣದ ಜನತೆಂು ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ದಂಧೆಗೆ ಕಡಿವಾಣ ಹಾಕಲು ಮುಂದಾಗುತ್ತಾರೋ ಇಲ್ಲವೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ.....



ಭಯವಿಲ್ಲದೆ ಮರಳು ದಂಧೆ ನಡೆಯುತ್ತಿದೆ
ರಾಜ್ಯ ಸರ್ಕಾರ ಮರಳು ಎತ್ತುವ ಕಾಂರ್ುಕ್ಕೆ ನಿಷೇಧ ಹೇರಿದ್ದರೂ ಈ ಕೃಷ್ಣಾ ನದಿ ಪಾತ್ರದಲ್ಲಿ ಅದು ಸಂಬಂಧವಿಲ್ಲದಂತೆ ಅವ್ಯಾಹತವಾಗಿ ನಡೆಯುತ್ತಿದೆ. ಅದೂ ಅಲ್ಲದೆ ಮರಳು ದಂಧೆ ಮಾಡಲು ಪರವಾನಿಗೆ ಎಂಬಂತೆ ಯಾವುದಕ್ಕೂ ಸಂಬಂಧವಿಲ್ಲದ ಕುಡಚಿ ದರ್ಗಾ ಎಸ್ಟೇಟ್ ಕಮೀಟಿ ವತಿಯಿಂದ ಪ್ರತಿ ಟ್ರ್ಯಾಕ್ಟರ್‌ನಿಂದ ರು. 1000 ಆಕರಿಸಲಾಗುತ್ತದೆ. ರಸೀದಿಯನ್ನೂ ನೀಡಲಾಗುತ್ತಿದೆ. ಈ ರಸೀದಿ ಪಡೆದವರು ಸರ್ಕಾರದ ಪರವಾನಿಗೆ ಎಂಬಂತೆ ಯಾವುದೇ ಭಯವಿಲ್ಲದೆ ಮರಳು ದಂಧೆ ನಡೆಸುತ್ತಿದ್ದಾರೆ.


ಅಕ್ರಮ ಮರಳು ಸಾಗಾಣಿಕೆ ಆಗದಂತೆ ನೋಡಿಕೊಂಡು ಹೋಗಬೇಕು. ಚೆಕ್‌ಪೋಸ್ಟ್ ತೆರೆದು, ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಒಂದು ವೇಳೆ ಅನಧಿಕೃತ ಮರಳು ಸಾಗಾಣಿಕೆ ಮಾಡುತ್ತಿದ್ದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಉಪ ತಹಸೀಲ್ದಾರ್, ಪಿಡಬ್ಲ್ಯೂಡಿ, ಸಿಪಿಐ ಹಾಗೂ ಪಿಎಸ್‌ಐ ಅವರಿಗೆ ಈಗಾಗಲೇ ಪತ್ರ ಬರೆಂುಲಾಗಿದೆ.
 ಶಿವಾನಂದ ಸಾಗರ, ರಾಯಬಾಗ ತಹಸೀಲ್ದಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT