ಇಂದಿನಿಂದ 2 ದಿನ ರಾಷ್ಟ್ರೀಯ ವಿಚಾರ ಸಂಕಿರಣ
ಹೊಸಪೇಟೆ: ಹಂಪಿ ಕನ್ನಡ ವಿವಿ ದಲಿತ ಸಂಸ್ಕೃತಿ ಅಧ್ಯಯನಪೀಠದಿಂದ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಏ. 8, 9ರಂದು ಅಸ್ಪೃಶ್ಯತೆ ಪ್ರತಿರೋಧಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಚಿತ್ರದುರ್ಗದ ಮುರುಘಾ ಮಠದ ಡಾ. ಮುರುಘಾ ಶರಣರು ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ಅತಿಥಿಯಾಗಿ ಭಾಗವಹಿಸುವರು. ವಿವಿ ಜಾನಪದ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ಮೊಗಳ್ಳಿ ಗಣೇಶ್ ಆಶಯ ಭಾಷಣ ಮಾಡುವರು.
ಅಸ್ಪೃಶ್ಯತೆಯ ಪ್ರತಿರೋಧಗಳ ಸೂಕ್ಷ್ಮ ನೆಲೆಗಳು: ಚಾರಿತ್ರಿಕ ನೋಟ ಕುರಿತು ಮಧ್ಯಾಹ್ನ 2ಕ್ಕೆ ತುಮಕೂರಿನ ಪ್ರೊ. ಕೆ.ಬಿ. ಸಿದ್ದಯ್ಯ ಮಾತನಾಡುವರು. ಆಧುನಿಕ ಸಂದರ್ಭದಲ್ಲಿ ಅಸ್ಪೃಶ್ಯತೆಯ ಸ್ವರೂಪ ಕುರಿತು ಬಳ್ಳಾರಿ ವಿಎಸ್ಕೆ ವಿವಿ ಪ್ರಾಧ್ಯಾಪಕ ಪ್ರೊ. ಜೆ. ಸೋಮಶೇಖರ್ ಮಾತನಾಡುವರು. ಬೆಂಗಳೂರಿನ ಪ್ರಾಧ್ಯಾಪಕ ಪ್ರೊ. ಮನೋಹರ್ ಯಾದವ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.
ಧಾರ್ಮಿಕ ಸಂಸ್ಥೆಗಳು ಮತ್ತು ಅಸ್ಪೃಶ್ಯತೆ ಕುರಿತು ಗುಲ್ಬರ್ಗ ಮಹಿಳಾ ಜನವಾದಿ ಸಂಘಟನೆ ಕೆ. ನೀಲಾ, ಜಾತಿ ಮತ್ತು ಅಸ್ಪೃಶ್ಯತೆ ಕುರಿತು ಬೆಂಗಳೂರಿನ ನ್ಯಾಷನಲ್ ಕಾಲೇಜು ಅಧ್ಯಾಪಕಿ ಡಾ. ಟಿ. ಪದ್ಮ, ಧರ್ಮ ಮತ್ತು ಅಸ್ಪೃಶ್ಯತೆ ಕುರಿತು ಹುಕ್ಕೇರಿ ಸರ್ಕಾರಿ ಕಾಲೇಜಿನ ಅಧೀಕ್ಷಕಿ ಡಾ. ಅನುಸೂಯಾ ಕಾಂಬಳೆ, ಲಿಂಗ ಸಂಬಂಧಗಳು ಮತ್ತು ಅಸ್ಪೃಶ್ಯತೆ ಕುರಿತು ತಿಪಟೂರಿನ ಸರ್ಕಾರಿ ಕಾಲೇಜಿನ ಅಧ್ಯಾಪಕ ಡಾ. ಕೆ. ಬಿ. ಸರಸ್ವತಿ ಮಾತನಾಡುವರು. ಆಂಧ್ರಪ್ರದೇಶದ ಪದ್ಮಾವತಿ ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ಪ್ರಸಾದ್ ಗೋಷ್ಠಿ ಅಧ್ಯಕ್ಷತೆ ವಹಿಸುವರು.
ಏ. 9ರ ಬೆಳಗ್ಗೆ 10.30ರ ಗೋಷ್ಠಿಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್- ಅಸ್ಪೃಶ್ಯತೆಯ ಪ್ರತಿರೋಧ ಕುರಿತು ಬೆಂಗಳೂರು ವಿವಿ ಸಹಪ್ರಾಧ್ಯಾಪಕ ಡಾ. ಡೊಮಿನಿಕ್ ಮಾತನಾಡುವರು. ಪೆರಿಯಾರ್ ಮತ್ತು ಪುಲೆ- ಅಸ್ಪೃಶ್ಯತೆಯ ಪತಿರೋಧ ಕುರಿತು ಹಂಪಿ ಕನ್ನಡ ವಿವಿ ಸಹಪ್ರಾಧ್ಯಾಪಕರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡುವರು. ದಲಿತ ಚಳವಳಿಯಲ್ಲಿ ಅಸ್ಪೃಶ್ಯತೆಪ್ರತಿರೋಧ ಕುರಿತು ಡಾ. ಬಿ.ಎಂ. ಪುಟ್ಟಯ್ಯ ಮಾತನಾಡುವರು. ಶಿವಮೊಗ್ಗ ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ. ದುರ್ಗಾದಾಸ್ ಗೋಷ್ಠಿ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 12.30ಕ್ಕೆ ಆನಂದ ಪಟವರ್ಧನ ಅವರ ಡಾ. ಅಂಬೇಡ್ಕರ್ ಕುರಿತು ಚಲನಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಅಸ್ಪೃಶ್ಯತೆ ಪಲ್ಲಟಗಳು ಮತ್ತು ಪರಿಹಾರ ಕುರಿತು ಸಂವಾದ ನಡೆಯಲಿದೆ. ಹಂಪಿ ಕನ್ನಡ ವಿವಿ ಸಹಪ್ರಾಧ್ಯಾಪಕ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಗೋಷ್ಠಿ ಅಧ್ಯಕ್ಷತೆ ವಹಿಸುವರು.
ಬೆಂಗಳೂರು ವಿವಿ ಅಧ್ಯಾಪಕಿ ಡಾ. ಶಾರದಾ, ಕೂಡ್ಲಿಗಿ ಸರ್ಕಾರಿ ಕಾಲೇಜಿನ ಅಧ್ಯಾಪಕಿ ಡಾ. ಕೊತ್ಲಮ್ಮ, ಕೊರಟಗೆರೆ ಸರ್ಕಾರಿ ಕಾಲೇಜಿನ ಡಾ. ಕೆ. ಸವಿತಾ, ಹಗರಿಬೊಮ್ಮನಹಳ್ಳಿಯ ಸುಯೋಧನ ಪ್ರಕಾಶನದ ಸುಧಾ ಚಿದಾನಂದಗೌಡ, ತುಮಕೂರಿನ ಸರ್ಕಾರಿ ಕಾಲೇಜಿನ ಅಧ್ಯಾಪಕಿ ಎನ್. ಗಂಗಮ್ಮ, ಹೊಸಪೇಟೆಯ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಡಾ. ಪನ್ನಂಗಧರ, ಗಂಗಾವತಿ ಸರ್ಕಾರಿ ಕಾಲೇಜಿನ ಅಧ್ಯಾಪಕ ಡಾ. ಜೆ. ಕೃಷ್ಣ, ಬೆಂಗಳೂರಿನ ಕನ್ನಡ ಕೋಶ ಮುಖ್ಯಸ್ಥ ಸಿ.ಎನ್. ರಾಮಣ್ಣ, ಬಳ್ಳಾರಿ ದೂರದರ್ಶನ ವರದಿಗಾರ ಸಿ. ಮಂಜುನಾಥ, ತುರುವೇಕೆರೆಯ ದಲಿತ ಕಾರ್ಯಕರ್ತ ಎಚ್.ಆರ್. ಚಂದ್ರಶೇಖರ್, ಬೆಂಗಳೂರಿನ ದಲಿತ ಚಿಂತಕ ಡಾ. ವಿ. ಲಕ್ಷ್ಮೀನಾರಾಯಣ ಸಂವಾದದಲ್ಲಿ ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಹಂಪಿ ಕನ್ನಡ ವಿವಿ ಮಾಹಿತಿ ಕೇಂದ್ರದ ಸಹಾಯಕ ನಿರ್ದೇಶಕಿ ಡಾ. ಡಿ. ಮೀನಾಕ್ಷಿ, ಸಹಪ್ರಾಧ್ಯಾಪಕರಾದ ಡಾ. ಎ.ಎಸ್. ಪ್ರಭಾಕರ್, ಡಾ. ಚೆಲುವರಾಜು, ಡಾ. ಹೆಬ್ಬಾಲೆ ಕೆ. ನಾಗೇಶ್, ಡಾ. ಪಿ. ಮಹಾದೇವಯ್ಯ, ರಮೇಶ್ ನಾಯಕ, ಸಿ. ವೆಂಕಟೇಶ್, ಡಾ. ತಾರಿಹಳ್ಳಿ ಹನುಮಂತಪ್ಪ, ಡಾ. ಎ. ವೆಂಕಟೇಶ್ ಭಾಗವಹಿಸುವರು.
ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಸಮಾರೋಪ ಭಾಷಣ ಮಾಡುವರು. ಹಂಪಿ ಕನ್ನಡ ವಿವಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಎಚ್. ಲಿಂಗಪ್ಪ, ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ಕುಲಸಚಿವ ಪ್ರೊ. ರಂಗರಾಜ ವನದುರ್ಗ ಅತಿಥಿಗಳಾಗಿ ಭಾಗವಹಿಸುವರು. ಹಂಪಿ ಕನ್ನಡ ವಿವಿ ಹಣಕಾಸು ಅಧಿಕಾರಿ ಡಾ. ಗುರುಲಿಂಗಪ್ಪ ಹೊಸಮನಿ ಅವರನ್ನು ಸನ್ಮಾನಿಸಲಾಗುವುದು. ಹಂಪಿ ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸುವರು ಎಂದು ವಿಚಾರ ಸಂಕರಣದ ಸಂಚಾಲಕಿ ಡಾ. ಸಿದ್ದಗಂಗಮ್ಮ ತಿಳಿಸಿದ್ದಾರೆ.