ದಾಖಲೆ ಇಲ್ಲದ ರು. 5.34 ವಶ
ಬಳ್ಳಾರಿ: ದಾಖಲೆ ಇಲ್ಲದೆ ಹಣ ತರುತ್ತಿದ್ದಾಗ ಪೊಲೀಸರು ರು. 5.34 ಲಕ್ಷ ವಶಪಡಿಸಿಕೊಂಡು, ಕಾರ್ ಸೀಜ್ ಮಾಡಿದ ಘಟನೆ ಅನಂತಪುರ ರಸ್ತೆ ಗುಂತಕಲ್ ಕ್ರಾಸ್ ಬಳಿ ನಡೆದಿದೆ. ಪಿ.ಡಿ. ಹಳ್ಳಿ ಠಾಣಾ ಸಬ್ ಇನ್‌ಸ್ಪೆಕ್ಟರ್ ಸಂದೀಪ್, ಸಿಬ್ಬಂದಿ ಮಂಗಳವಾರ ತಡರಾತ್ರಿ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲಿಸುತ್ತಿದ್ದಾಗ ವಿಜಯವಾಡದಿಂದ ಕಾರಿನಲ್ಲಿ ರು. 5.34 ಲಕ್ಷ ತರುತ್ತಿರುವಾಗ ಪರಿಶೀಲಿಸಿ ಅದಕ್ಕೆ ದಾಖಲೆ ಇರದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಆದಿಶೇಷರಾವ್ ಅವರನ್ನು ವಿಚಾರಿಸಿದಾಗ ಕೆನರಾ ಬ್ಯಾಂಕಿಗೆ ಕಟ್ಟಲು ತರುತ್ತಿರುವುದಾಗಿ ಹೇಳಿದರು. ದಾಖಲೆ ಇರದ ಕಾರಣ ಹಣ, ಕಾರು ವಶಪಡಿಸಿಕೊಂಡು ಪಿ.ಡಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.