ಇಂದು ಪುನರ್ ನಿರ್ಮಾಣ ಕಾರ್ಯ ವೀಕ್ಷಣೆಗೆ ತಂಡ
ಬಳ್ಳಾರಿ: ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ 9 ಕಂಪನಿಗಳ ಗಣಿ ಪ್ರದೇಶದಲ್ಲಿ ಕೈಗೊಂಡಿರುವ ಆರ್ ಆ್ಯಂಡ್ ಆರ್ (ಪುನಶ್ಚೇತನ ಹಾಗೂ ಪುನರ್ನಿರ್ಮಾಣ) ಕಾರ್ಯವನ್ನು ಪರಿಶೀಲಿಸಲು ಒಟ್ಟು 16 ತಜ್ಞರ ಎರಡು ತಂಡಗಳು ಭೇಟಿ ನೀಡಲಿದೆ.
ಒಂದು ತಂಡದಲ್ಲಿ ಐವರು ವಿಜ್ಞಾನಿಗಳು, ಇಬ್ಬರು ತಜ್ಞರು, ಒಬ್ಬ ಸಂಶೋಧನಾ ಸಹಾಯಕ ಇರಲಿದ್ದಾರೆ. ಏ.13ರಿಂದ 23ರವರೆಗೆ ಮೂರು ಜಿಲ್ಲೆಗಳ ವಿವಿಧ ಗಣಿ ಪ್ರದೇಶಗಳಿಗೆ ಎರಡು ತಂಡಗಳು ಭೇಟಿ ನೀಡಲಿದೆ.
ಮೊದಲನೇ ತಂಡ ಚಿತ್ರದುರ್ಗ ಜಿಲ್ಲೆಯ ಗರುಡಾದ್ರಿ ಇಪೆಕ್ಸ್ ಪ್ರೈವೇಟ್ ಲಿಮಿಟೆಡ್ (ಎಂಎಲ್ ನಂ. 2583), ಕೆನರಾ ಮಿನರಲ್ಸ್ (ಎಂಎಲ್ 2656), ಬಳ್ಳಾರಿ ಜಿಲ್ಲೆಯ ಎಚ್.ಜಿ. ರಂಗನಗೌಡ (ಎಂಎಲ್ 2549), ಆರ್ ಚಾರುಚಂದ್ರ (ಎಂಎಲ್ 2544) ಪ್ರದೇಶದಲ್ಲಿ ಪರಿಶೀಲಿಸಲಿದೆ.ಎರಡನೇ ತಂಡ ತುಮಕೂರು ಜಿಲ್ಲೆಯ ಬಿ.ಆರ್. ಗಣಪತಿ ಸಿಂಗ್ (ಎಂಎಲ್ 2570), ಶ್ರೀ ಯು. ಉಪೇಂದ್ರ (ಎಂಎಲ್ 1957), ಬಳ್ಳಾರಿ ವ್ಯಾಪ್ತಿ ಗಡಗಿ ಮಿನರಲ್ಸ್ ಮೈನಿಂಗ್ ಕಂಪನಿ (ಎಂಎಲ್ 2489), ಕುಮಾರಸ್ವಾಮಿ ಮೈನಿಂಗ್ ಕಂಪನಿ (ಎಂಎಲ್ 2087)ಗಳಿಗೆ ಭೇಟಿ ನೀಡಲಿದೆ.