ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೂಡ್ಲಿಗಿ ಪಪಂ: ದೂರು ನಿವಾರಣಾ ಘಟಕ ಆರಂಭ

Lingaraj Badiger
Updated On : 13 Apr 2013, 11:37 am

ಕೂಡ್ಲಿಗಿ: ಪಟ್ಟಣದ ನೈರ್ಮಲ್ಯ, ಬೀದಿದೀಪ, ನೀರು ಸರಬರಾಜು ಮತ್ತಿತರ ದುರಸ್ತಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪಪಂ ಕಾರ್ಯಾಲಯದಲ್ಲಿ ಸಾರ್ವಜನಿಕ ಕುಂದು-ಕೊರತೆ ನಿವಾರಣೆಗಾಗಿ ಪ್ರತ್ಯೇಕ ಘಟಕ ಪ್ರಾರಂಭಿಸಲಾಗಿದೆ. ಕೂಡ್ಲಿಗಿ ಪಟ್ಟಣದ ನಾಗರಿಕರು ಸಮಸ್ಯೆ ಇದ್ದಲ್ಲಿ ದೂ. 08391-220026ಗೆ ಕರೆ ಮಾಡಿ ಅಥವಾ ಢಿಢಿಢಿ.್ಞ್ಡಜಛಟಛ್ಜ್ಝಡ್ಟಿಢಿಟಿ.್ಜ್ಟಢ.್ಝಟಿ ವೆಬ್‌ಸೈಟ್ ಮೂಲಕ ದೂರು ದಾಖಲಿಸಬಹುದು ಎಂದು ಪಪಂ ಮುಖ್ಯಾಧಿಕಾರಿ ಪ್ರೇಮ್‌ಚಾರ್ಲ್ಸ್ ತಿಳಿಸಿದ್ದಾರೆ.
ವಿಕಾಸ ಪರಿಷತ್‌ಗೆ ಆಯ್ಕೆ
ಹೊಸಪೇಟೆ: 2013-14ನೇ ಸಾಲಿನ ಭಾರತ ವಿಕಾಸ ಪರಿಷತ್‌ನ ಹೊಸಪೇಟೆ ನಗರದ ಪದಾಧಿಕಾರಿಗಳ ಆಯ್ಕೆ ಸೋಮವಾರ ನಡೆಯಿತು. ನಗರ ಘಟಕದ ಅಧ್ಯಕ್ಷರಾಗಿ ಕಾಂತಿಲಾಲ್ ಜೈನ್, ಕಾರ್ಯದರ್ಶಿ ಐಲಿ ಮಂಜುನಾಥ್, ಖಜಾಂಚಿ ಮಡ್ಡೇರ ವೆಂಕಪ್ಪ ಪುನರಾಯ್ಕೆಗೊಂಡಿದ್ದಾರೆ. ಸಭೆಯಲ್ಲಿ ಕರ್ನಾಟಕ ಉತ್ತರ ಪ್ರಾಂತದ ಅಧಿಕಾರಿ ವಿಠಲ್‌ದಾಸ್ ಪಟೇಲ್. ಶ್ಯಾಮ್ ಚೌದ್ರಿ, ಗೊವಿಂದ ಕುಲಕರ್ಣಿ, ರೇವಣಸಿದ್ದಪ್ಪ, ಸುಜಾತಾ, ಕೆ. ನರಸಿಂಹಮೂರ್ತಿ (ಅಪ್ಪಣ್ಣ) ಸಭೆಯಲ್ಲಿ ಭಾಗವಹಿಸಿದ್ದರು.
ಅಕ್ರಮ ಮದ್ಯ ವಶ
ಬಳ್ಳಾರಿ: ಬಳ್ಳಾರಿ ತಾಲೂಕು ಹೊನ್ನಳ್ಳಿ ತಾಂಡದಲ್ಲಿ ಅಕ್ರಮವಾಗಿ ಸಂಗ್ರಹಿಟ್ಟಿದ್ದ ರು.  40 ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು, ಇಬ್ಬರನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಂಡದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ವಿಸ್ಕಿ, ಬ್ರಾಂದಿ ಇನ್ನಿತರ ಮದ್ಯದ ಬಾಟಲಿಗಳನ್ನು ಡಿಸಿಐಬಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಡಿಸಿಬಿಐನ ಉಮೇಶ್ ಈಶ್ವರ ನಾಯಕ್ ತಿಳಿಸಿದ್ದಾರೆ.
ಅಕ್ರಮ ಮದ್ಯ ವಶ
ಬಳ್ಳಾರಿ: ತಾಲೂಕಿನ ಮುಂಡ್ರಗಿ ಗ್ರಾಮದ ಗೂಡಂಗಡಿಯೊಂದರಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಬಳ್ಳಾರಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ ರು.  16 ಸಾವಿರ ಮೌಲ್ಯದ 3 ಬಾಕ್ಸ್ ಲಿಕ್ಕರ್‌ನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕುಮಾರ್ ಎಂಬುವವನು ಪರಾರಿಯಾಗಿದ್ದಾನೆ. ಗ್ರಾಮೀಣ ಪೊಲೀಸ್ ಠಾಣಾ ಪಿಎಸ್‌ಐ ಸೋಮಶೇಖರ ಅವರು ಡಬ್ಬಾ ಅಂಗಡಿ ಮೇಲೆ ದಾಳಿ ನಡೆಸಿ, ಲಿಕ್ಕರ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ನಗರದ ಬೈಪಾಸ್ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಬೆಂಗಳೂರಿನ ಕೆಂಗೇರಿ ಉಪನಗರ ಮೂಲದ ಕ್ಲೀನರ್ ಚಂದ್ರು (27) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯರಾತ್ರಿ ಕೆಟ್ಟು ನಿಂತಿದ್ದ ತಮ್ಮ ಲಾರಿಯ ದುರಸ್ತಿ ಗಾಗಿ ಕಾಯುತ್ತಿದ್ದ ಈತನು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಸಂಚಾರಿ ಠಾಣಾ ಇನ್‌ಸ್ಪೆಕ್ಟರ್ ವಸಂತಕುಮಾರ್, ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ ಮತ್ತಿತರರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement