ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅವಧೂತರ ನಿಗೂಢ ಸಾವು: ತನಿಖೆಗೆ ಒತ್ತಾಯ

Lingaraj Badiger
Updated On : 15 Apr 2013, 12:09 pm

ಬಳ್ಳಾರಿ:  ಬೀದರ್‌ನ ಚೌಳಿ ಮಠದಲ್ಲಿ ಇತ್ತೀಚೆಗೆ ಗಣೇಶ್ವರ ಅವಧೂತರು ಮತ್ತು ಮೂವರು ಸ್ವಾಮೀಜಿಗಳು ನಿಗೂಢವಾಗಿ ಮೃತಪಟ್ಟಿರುವ ಬಗ್ಗೆ ಸರ್ಕಾರ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ವೀರಶೈವ ಸಮಾಜದ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂವರು ಸ್ವಾಮೀಜಿಗಳ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇಂತಹ ಘಟನೆಗಳು ಪುನಃ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರಾದ ಎಚ್. ಮುರಾರಿಗೌಡ ಗೋನಾಳ್, ಗೌರಿಶಂಕರ್, ಹಲಕುಂದಿ ವಿಜಯಕುಮಾರಗೌಡ, ವಿಶ್ವನಾಥ, ಎಂ. ದೇವೇಶ್ ಹಲಕುಂದಿ, ಕೋಳೂರು ಚಂದ್ರಶೇಖರಗೌಡ, ಶಬರಿ ರವಿ, ಬಣಕರ್ ಮಹೇಶ್ ಇತರರು ಒತ್ತಾಯಿಸಿದ್ದಾರೆ.
ಮಾರೆಣ್ಣಗೆ ಅವಕಾಶ: ಸ್ವಾಗತ
ಬಳ್ಳಾರಿ:  ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ, ದಲಿತ ಮುಖಂಡ ಎಲ್. ಮಾರೆಣ್ಣ ಅವರಿಗೆ ಅವಕಾಶ ಕಲ್ಪಿಸಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸ್ವಾಗತಿಸಿದೆ. ಡಿ.ಎಸ್.ಎಸ್‌ನ ಗುಲಬರ್ಗಾ ವಿಭಾಗೀಯ ಸಂಚಾಲಕ ಎ. ಈಶ್ವರಪ್ಪ ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿದ್ದು, ಎಲ್. ಮಾರೆಣ್ಣ ಅವರು, ಜಿಲ್ಲೆಯ ಅಸಂಖ್ಯಾತ ಮಾದಿಗ ಜನಾಂಗದವರಿಗೆ ಸೇರಿದವರಾಗಿದ್ದು, ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಂತೆ ಕಾರ್ಯ ನಿರ್ವಹಿಸಿದ್ದಾರೆ. ತಾಪಂ ಸದಸ್ಯರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.
ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಎ. ಈಶ್ವರಪ್ಪ, ಬಿ. ಗುರುಸಿದ್ದಪ್ಪ, ನರೇಶ್ ಕುಮಾರ್, ಶಿವರಾಜ್, ರಾಮಣ್ಣ, ಹುಬ್ಬಳ್ಳಿ ತಾಯಣ್ಣ, ಬಿ.ಎಚ್. ತಾಯಣ್ಣ, ಹೊಲಿಬಾಷಾ, ನಾಗರಾಜ ಇತರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement