ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಲ್ವಿ ಡ್ಯಾಂಗೆ ಶಾಶ್ವತ ನೀರು: ಭೀಮಾನಾಯ್ಕ

Lingaraj Badiger
Updated On : 15 Apr 2013, 12:09 pm

ಹಗರಿಬೊಮ್ಮನಹಳ್ಳಿ: ಬಿಸಿಲೂರಿನ ಜೀವನಾಡಿ ತಾಲೂಕಿನ ಮಾಲ್ವಿ ಡ್ಯಾಂಗೆ ಶಾಶ್ವತ ನೀರೋದಗಿಸುವ ಯೋಜನೆಯನ್ನು ಜಾರಿಗೊಳಿಸಲು ತಾವು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಎಸ್. ಭೀಮಾನಾಯ್ಕ ಹೇಳಿದ್ದಾರೆ.
ಪಟ್ಟಣದ ರಾಮನಗರದ ರೈತರ ಓಣಿ, ಅರಳಿಹಳ್ಳಿ, ಕುರುದಗಡ್ಡಿ ಗ್ರಾಮಗಳಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ಕಾರ್ಯ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 20 ಸಾವಿರ ಎಕರೆ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವ ಮಾಲ್ವಿ ಡ್ಯಾಂ ಸದ್ಯ ನೀರಿನ ಬರ ಎದುರಿಸುತ್ತಿದೆ. ಶಾಶ್ವತ ನೀರೋದಗಿಸುವ ಯೋಜನೆ ಜಾರಿಗೊಂಡರೆ ಮಾತ್ರ ಡ್ಯಾಂಗೆ ನೀರಿನ ಬರ ನಿವಾರಣೆಯಾಗಲಿದ್ದು ತಾವು ಅಧಿಕಾರಕ್ಕೆ ಬಂದರೆ ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಜಾರಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು. ತುಂಗಾಭದ್ರಾ ಜಲಾಶಯ ಭರ್ತಿಯಾದ ಸಮಯದಲ್ಲಿ ಪ್ರತಿವರ್ಷ ಸಾಕಷ್ಟು ನೀರು ನದಿಗೆ ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಅದೇ ನೀರನ್ನು ಸದ್ಭಳಕೆ ಮಾಡಿಕೊಂಡು ತಾಲೂಕಿನ ಆಯ್ದ ಭಾಗಗಳಲ್ಲಿ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿರುವೆ ಎಂದರು. ಬಿಎಸ್ಸಾರ್ ಮುಖಂಡ ಸಿನಿಮಾ ಮಂಜಣ್ಣ, ಎಚ್.ಎಂ. ಚೋಳರಾಜ, ಹೂಗಾರ ಮಲ್ಲಣ್ಣ, ಕಡ್ಲಬಾಳು ವೆಂಕಟೇಶ, ನಾಗರಾಜ ಜನ್ನು, ಸಂಪತ್‌ಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement