ಶಾಸಕ ನೇಮಿರಾಜ ನಾಯ್ಕ ವಿವಿಧೆಡೆ ಮತ ಯಾಚನೆ
ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ನೇಮಿರಾಜ ನಾಯ್ಕ ಭಾನುವಾರ ಪಟ್ಟಣದ ರಾಮನಗರದ ರೈತರ ಓಣಿ, ಶ್ರೀಮಾರುತಿ ಗರಡಿ ಮನೆ ರಸ್ತೆ, ಕೆಇಬಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ತಮ್ಮ ಬೆಂಬಲಿಗರ ಸಮೇತರಾಗಿ ಮನೆ, ಮನೆಗೆ ತೆರಳಿ ಮತ ಯಾಚಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನೇಮಿರಾಜ ನಾಯ್ಕ, ಐದು ವರ್ಷಗಳ ಶಾಸಕತ್ವ ಅವಧಿಯಲ್ಲಿ ಕ್ಷೇತ್ರಾದ್ಯಂತ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜಾರಿಗೊಳಿಸಿದ್ದೇನೆ. ಆ ಮೂಲಕ ಕ್ಷೇತ್ರದ ಸಮಗ್ರ ಪ್ರಗತಿಗೆ ಶ್ರಮಿಸಿದ್ದೇನೆ. ಮುಖ್ಯವಾಗಿ ಕ್ಷೇತ್ರಕ್ಕೆ 5 ಹೊಸ ಏತನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಸುಮಾರು 40 ಸಾವಿರಕ್ಕೂ ಅಧಿಕ ಎಕರೆ ಒಣಭೂಮಿಗೆ ಶಾಶ್ವತ ನೀರೊದಗಿಸುವ ಪ್ರಯತ್ನ ಮಾಡಿದ್ದೆನೆ. ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ನೀರಾವರಿ ಯೋಜನೆಗಳನ್ನು ತರುವ ಬಾಕಿ ಇದೆ. ಈ ಸಲ ಜನತೆ ಅಶೀರ್ವಾದ ಮಾಡಿದರೆ ಅರ್ಧಕ್ಕೆ ಉಳಿದಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣಗೊಳಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದ ವರ್ತಕರ ಸಂಘದ ಮುಖಂಡರಾದ ಚಿತ್ರಗಾರ ರುದ್ರಪ್ಪ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಡಿಗೇರ ಸಿದ್ದಪ್ಪ ಸೇರಿದಂತೆ ಹಲವರು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರೆಗಲ್ ಕೊಟ್ರೇಶ್, ಕಿನ್ನಾಳ ಸುಭಾಷ್, ಗಿರಿರಾಜರೆಡ್ಡಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಗಂಗಣ್ಣ, ಡಿಶ್ ಮಂಜುನಾಥ, ಚಿಂತ್ರಪಳ್ಳಿ ಗ್ರಾಪಂ ಸದಸ್ಯರಾದ ಕನಕಪ್ಪ, ಸೆರೆಗಾರ ಹುಚ್ಚಪ್ಪ, ಅಗಸರ ಬಾಳಪ್ಪ, ಕುರುದಗಡ್ಡಿ ರಾಮಣ್ಣ, ಡಿಶ್ ವೆಂಕಟೇಶ, ಭೋವಿ ಬಸವರಾಜ, ಬಿ. ಶ್ರೀನಿವಾಸ, ತಂಬ್ರಳ್ಳಿ ಕೊಟ್ರೇಶ್ ಸೇರಿದಂತೆ ಹಲವರು ಶಾಸಕರ ಜೊತೆಯಲ್ಲಿದ್ದರು.