ಅಕ್ರಮ ಮದ್ಯ ವಶ: ವ್ಯಕ್ತಿ ಬಂಧನ
ಕೊಟ್ಟೂರು: ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ತಾಣದ ಮೇಲೆ ಲಾಟರಿ ಅಬಕಾರಿ ಇಲಾಖೆಯ ಹಡಗಲಿ ಪೊಲೀಸರ ತಂಡ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿ, 5 ಸಾವಿರಕ್ಕೂ ಹೆಚ್ಚು ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಘಟನೆ ಸೋಮವಾರ ಸಮೀಪದ ದೂಪದಹಳ್ಳಿ ತಾಂಡದಲ್ಲಿ ನಡೆದಿದೆ.
ತಾಂಡದ ಗೋವಿಂದನಾಯ್ಕನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಗೋವಿಂದನಾಯ್ಕ ತಾಂಡಾದಲ್ಲಿ ಸುಮಾರು ದಿನಗಳಿಂದ ಮದ್ಯವನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ.
ಈ ಕುರಿತು ಮಾಹಿತಿ ಅರಿತ ಅಬಕಾರಿ ಲಾಟರಿ ಪೊಲೀಸ್ ದಳದವರು ಕ್ರಮಕೈಗೊಂಡು ಇದೀಗ ಈ ದಂಧೆಗೆ ಕಡಿವಾಣ ಹಾಕಿದ್ದಾರೆ.