ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

22ಕ್ಕೆ ರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಫರ್ಧೆ

Mainashree
Updated On : 19 Apr 2013, 1:40 am

ಹೊಸದುರ್ಗ: ತಾಲೂಕಿನ ನಾಗೇನಹಳ್ಳಿಯಲ್ಲಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರುತಿ ಯುವಕ ಸಂಘದ ಆಶ್ರಯದಲ್ಲಿ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ ಏ.22ರ ಸೋಮವಾರ ಜರುಗಲಿದೆ.   ಜೋಡಿ ಎತ್ತಿನ ಗಾಡಿ ಸ್ಫರ್ಧೆಯಲ್ಲಿ 50 ಕ್ಕೂ ಹೆಚ್ಚು ಸ್ಫರ್ಧಾಳು ಭಾಗವಹಿಸುವ ಜೊತೆ ಸಾವಿರಾರು ರೈತರು ವೀಕ್ಷಿಸಲು ಆಗಮಿಸುತ್ತಿರುವುದರಿಂದ ಸಾಧ್ಯವಾದಷ್ಟು ನೆರಳು, ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.   ಮೊದಲು ಬಹುಮಾನ ರು. 20,000, 2ನೇ ಬಹುಮಾನ ರು. 15,000, 3ನೇ ಬಹುಮಾನ  ರು. 10,000  ಹಾಗೂ 4ನೇ ಬಹುಮಾನ ಸಾವಿರ ಹಾಗೂ ಫಲಕಗಳನ್ನು ನೀಡಲಾಗುತ್ತದೆ. ಜೋಡಿ ಎತ್ತಿನ ಗಾಡಿ ಓಟದ ಸ್ಫರ್ಧೆಗೆ ಭಾಗವಹಿಸುವ ರೈತರು ನೋಂದಣಿ ಮಾಡಿಕೊಳ್ಳು ಕೋರಿದೆ. ನಾಗೇನಹಳ್ಳಿ ಗ್ರಾಮವು ಹೊಸದುರ್ಗ  ಪಟ್ಟಣದಿಂದ ಬಾಗೂರು ಗ್ರಾಮವಾಗಿ 6 ಕಿ.ಮೀ. ದೂರದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement