ರೆಡ್ಡಿಗೆ ರೋಲ್ಸ್‌ರಾಯ್ ಮರಳಿಸಿದ ಸಿಬಿಐ
ಕ.ಪ್ರ. ವಾರ್ತೆ, ಬಳ್ಳಾರಿ, ಏ.18-
ಕೋರ್ಟ್ ಆದೇಶದ ಮೇರೆಗೆ ಸಿಬಿಐ ಸೀಜ್ ಮಾಡಿದ್ದ ಜನಾರ್ದನ ರೆಡ್ಡಿಯವರ ಐಷಾರಾಮಿ ರೋಲ್ಸ್‌ರಾಯ್ ಕಾರನ್ನು ಅಧಿಕಾರಿಗಳು ಗುರುವಾರ ಮುಕ್ತಗೊಳಿಸಿ ರೆಡ್ಡಿ ಅವರ ಕುಟುಂಬಕ್ಕೆ ಮರಳಿ ನೀಡಿದರು.
ರೆಡ್ಡಿ ಬಂಧನವಾರದ ಮಾರನೇ ದಿನ ಸೆ.6, 2011ರಂದು ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ ಬಂಗಾರ, ನಗದು ಸೇರಿದಂತೆ ಇವರ ರೋಲ್ಸ್‌ರಾಯ್ ಕಾರನ್ನು ಸಿಬಿಐ ಸೀಜ್ ಮಾಡಿದ್ದರು.
ದಾಳಿಯ ಸಂದರ್ಭ ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ ಆಂಧ್ರಪ್ರದೇಶದ ಸಿಬಿಐ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಸಿಬಿಐ ಅಧಿಕಾರಿಗಳಾದ ಎಂ.ಎಂ.ಎ. ನಂದಾ, ಬಿ. ಮಿಶ್ರಾ ಗುರುವಾರ ಬೆಳಗ್ಗೆ ಆಗಮಿಸಿದ್ದರು. ಅವರ ಕೌಲ್‌ಬಜಾರ್ ಠಾಣೆಯ ಅಧಿಕಾರಿಗಳಿಗೆ ಆದೇಶ ಪ್ರತಿ ನೀಡಿ, ಆರ್‌ಟಿಒ ಅಧಿಕಾರಿಗಳು ಹಾಗೂ ಕೌಲ್‌ಬಜಾರ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಕಾರನ್ನು ಪರಿಶೀಲಿಸಿ, ಮರಳಿ ನೀಡಲಾಯಿತು.
ಇತ್ತೀಚೆಗೆ ಜನಾರ್ದನ ರೆಡ್ಡಿ ಅವರ ಹೆಲಿಕಾಪ್ಟರ್ ಅನ್ನು ಮುಕ್ತಗೊಳಿಸಲಾಗಿತ್ತು.
ಇದೀಗ ರೋಲ್ಸ್‌ರಾಯ್ ಕಾರು ಬಿಡುಗಡೆಯಾಗಿರುವುದು ಕುತೂಹಲ ಮೂಡಿಸಿದೆ.