ಗಜಾನನ ಭಟ್‌ಗೆ ಧನ್ಯಶ್ರೀ ಪ್ರಶಸ್ತಿ ಪ್ರದಾನ
ಕ.ಪ್ರ. ವಾರ್ತೆ ,ಹೊಸನಗರ, ಏ.20
ರಾಮಚಂದ್ರಾಪುರ ಮಠದಲ್ಲಿ ವೈಭವದ ರಾಮೋತ್ಸವ ಕಾರ್ಯಕ್ರಮ ಶನಿವಾರ ಮುಕ್ತಾಯಗೊಂಡಿತು. ರಥೋತ್ಸವ, ಧಾರ್ಮಿಕ ಸಭೆ, ರಾಮಕಥಾ ಮಾಲಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮಠದಲ್ಲಿ ಸಂಪನ್ನಗೊಂಡವು.
ರಾಮೋತ್ಸವದ ಕೊನೆಯ ದಿನ ಶ್ರೀಮಠದಿಂದ ಕೊಡಮಾಡುವ ಧನ್ಯಶ್ರೀ ಪ್ರಶಸ್ತಿಯನ್ನು ರಾಘವೇಶ್ವರ ಶ್ರೀಗಳು ಶ್ರೀಮಠದ ಪ್ರಧಾನ ಅರ್ಚಕ ಆಚಾರ ವಿಚಾರ ಗಜಾನನಭಟ್‌ಗೆ ಪ್ರದಾನ ಮಾಡಿದರು.