ದೂರು ನೀಡಲು ಕಂಟ್ರೋಲ್ ರೂಂ
ಬಳ್ಳಾರಿ: ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿ, ಆಯಾ ವಿಧಾನಸಭಾ ಕ್ಷೇತ್ರಗಳ ತಾಲೂಕು ಕಚೇರಿ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 5ರಂದು ನಡೆಯಲಿದ್ದು, ಜಿಲ್ಲೆಗೆ ಸಂಬಂಧಿಸಿದ ಚುನಾವಣಾ ದೂರುಗಳಿದ್ದಲ್ಲಿ ಅಥವಾ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಬೇಕಾಗಿದ್ದಲ್ಲಿ ಸಂಬಂಧಿಸಿದ ಕಂಟ್ರೋಲ್ ರೂಂ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ. ಹೂವಿನಹಡಗಲಿ (ತಾಲೂಕು ಕಚೇರಿ)-08399-240238, ಹಗರಿಬೊಮ್ಮನಹಳ್ಳಿ (ತಾಲೂಕು ಕಚೇರಿ)-08397-238225, ವಿಜಯನಗರ (ತಾಲೂಕು ಕಚೇರಿ)-08394-222270, ಕಂಪ್ಲಿ (ತಾಲೂಕು ಕಚೇರಿ)- 08394-2550221, ಸಿರುಗುಪ್ಪ (ತಾಲೂಕು ಕಚೇರಿ)-08396-220238, ಬಳ್ಳಾರಿ (ತಾಲೂಕು ಕಚೇರಿ)- 08392-277415, ಬಳ್ಳಾರಿ ನಗರ (ಮಹಾನಗರ ಪಾಲಿಕೆ ಆಯುಕ್ತರ ಕಚೇರಿ)- 08392-272356, ಸಂಡೂರು (ತಾಲೂಕು ಕಚೇರಿ)- 08395-260241 ಕೂಡ್ಲಿಗಿ (ತಾಲೂಕು ಕಚೇರಿ)- 08391-220225, ಜಿಲ್ಲಾಧಿಕಾರಿಗಳ ಕಚೇರಿ-08392-273229 ಹಾಗೂ ಟೋಲ್ ಫ್ರೀ ನಂಬರ್-08392-277177, ವಾರ್ತಾ ಇಲಾಖೆ- 08392-275198 ಹಾಗೂ ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ ಅವರ ಮೊ.ಸಂ-9880081691ಗೆ ದೂರು ಅಥವಾ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.