ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೇಂದ್ರ ಯೋಜನೆ, ರಾಜ್ಯ ಸರ್ಕಾರದ ಹೆಸರು!

Rashmi Kasaragodu
Updated On : 23 Apr 2013, 10:37 am

ಹೂವಿನಹಡಗಲಿ:  ಕೇಂದ್ರದ ಯೋಜನೆಗಳಿಗೆ ಹೊಸ ನಾಮಕರಣ ಮಾಡಿ ರಾಜ್ಯ ಸರ್ಕಾರದ ಯೋಜನೆಗಳೆಂದು ಬಿಂಬಿಸುತ್ತಿರುವ ಬಿಜೆಪಿ ರಾಜ್ಯದಲ್ಲಿ ಮಾಡಿರುವ ಸಾಧನೆ ಶೂನ್ಯ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ. ಪರಮೇಶ್ವರನಾಯ್ಕ ಪರ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 108 ಆರೋಗ್ಯ ಕವಚ ಯೋಜನೆಗೆ ಕೇಂದ್ರ ಸಾವಿರಾರು ಕೋಟಿ ಅನುದಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ಈ ಯೋಜನೆ ತಮ್ಮದೆಂದು ಹೊಸ ಹೆಸರಿಟ್ಟು ಮತದಾರರನ್ನು ಹಾದಿ ತಪ್ಪಿಸುತ್ತಿದೆ ಎಂದರು. ಪವಿತ್ರ ವಿಧಾನಸೌಧದಲ್ಲಿ ಮಾಡಬಾರದ ಕೆಲಸ ಮಾಡಿರುವ ಬಿಜೆಪಿ ಸರ್ಕಾರಕ್ಕೆ ಸೈದ್ಧಾಂತಿಕ ನಿಲುವುಗಳೇ ಇಲ್ಲದೆ ಮೂರು ತುಕ್ಕಡಿ ಆಗಿದೆ. ಇಂಥವರಿಗೆ ಮತದಾರರು ತಕ್ಕ ಶಿಕ್ಷೆ ನೀಡಬೇಕಾದರೆ ಕಾಂಗ್ರೆಸ್ ಬೆಂಬಲಿಸಿ ಎಂದರು.
ಮಾಜಿ ಸಚಿವ ಸಗೀರ್ ಅಹಮದ್ ಮಾತನಾಡುತ್ತಾ, ಬಿಜೆಪಿಯವರು ತಮ್ಮ ಕನಸುಗಳನ್ನು ನನಸು ಮಾಡಿಕೊಂಡರೇ ಹೊರತು ಮತದಾರರ ಆಸೆ ಈಡೇರಲಿಲ್ಲ. ಸ್ವಾರ್ಥಕ್ಕಾಗಿ ರಾಜ್ಯದ ಹಿತ ಬಲಿ ಕೊಟ್ಟಿರುವ ಬಿಜೆಪಿ ಬಡವರ ಅನ್ನ ಕಿತ್ತುಕೊಂಡಿದೆ ಎಂದು ಕಿಡಿಕಾರಿದರು.
ಪವಿತ್ರ ವಿಧಾನಸೌಧದಲ್ಲಿ ಅನಾಚಾರ ಮಾಡಿರುವ ಬಿಜೆಪಿ ಸಚಿವರು ಮಹಿಳೆಯರ ಮುಂದೆ ಬಂದು ಮತ ಕೇಳಿದರೆ ಮುಖಕ್ಕೆ ಉಗಿಯಿರಿ. ಸೀತೆ, ರಾಮ ಜಪ ಮಾಡಿ ಅಂಥವರ ಹೆಸರಿನ ಮೇಲೆ ಅಧಿಕಾರ ಗದ್ದುಗೆ ಏರಿರುವ ಬಿಜೆಪಿ ರಾಜ್ಯದ ಸಂಸ್ಕೃತಿಗೆ ಧಕ್ಕೆ ತರುವಂತಹ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿದರು. ಮುಖಂಡರಾದ ಕೆ.ಸಿ. ಕೊಂಡಯ್ಯ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಎಂ. ಪರಮೇಶ್ವರಪ್ಪ, ತಾಪಂ ಅಧ್ಯಕ್ಷೆ ದುರುಗಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement