ರು. 70 ಸಾವಿರ ಮೌಲ್ಯದ ಅಕ್ರಮ ಮದ್ಯ ವಶ
ಬಳ್ಳಾರಿ: ತಾಲೂಕಿನ ಸೋಮಸಮುದ್ರ ಮತ್ತು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಬಳಿ ನಡೆಸಿದ ದಾಳಿಯಲ್ಲಿ ರು. 70 ಸಾವಿರ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪಆಯುಕ್ತ ಬಿ.ಎಂ. ಮೆಹಬೂಬ್ ಖಾನ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2 ದ್ವಿಚಕ್ರ ವಾಹನ ಮತ್ತು 7 ಬಾಕ್ಸ್ ಮದ್ಯ ಜಪ್ತಿ ಮಾಡಲಾಗಿದೆ. ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ಬಿ. ಓಬಳಾಪತಿ, ನಿರೀಕ್ಷಕ ವಿಶ್ವನಾಥ ಗಾಣಿಗೇರ ಹಾಗೂ ಸಿಬ್ಬಂದಿ ಇದ್ದರು.