ಎಂಸಿಸಿ ತಂಡ, ಮೇಲುಸ್ತುವಾರಿ ಅಧಿಕಾರಿಗಳ ನೇಮಕ: ಆದೇಶ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 23
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ರಚಿಸಿ, ಮೇಲುಸ್ತುವಾರಿಗಾಗಿ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಎಂಸಿಸಿ ತಂಡ, ಫ್ಲೈಯಿಂಗ್ ಸ್ಕ್ವಾಡ್, ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್-1, ಫ್ಲೈಯಿಂಗ್ ಸ್ಕ್ವಾಡ್-2 ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳನ್ನು ಈ ತಂಡದ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ತಂಡದಲ್ಲಿರುವ ಅಧಿಕಾರಿಗಳ ಹಾಗೂ ಮೊಬೈಲ್ ಸಂಖ್ಯೆಯ ವಿವರ ಇಂತಿದೆ.
ತಂಡದ ಮುಖ್ಯಸ್ಥರನ್ನಾಗಿ ಬುಡಾ ಆಯುಕ್ತೆ ಖಾಜಿ ನಫೀಸಾ (9741759475) ನೇಮಿಸಲಾಗಿದೆ. ಬಳ್ಳಾರಿ ನಗರ ಡಿವೈಎಸ್ಪಿ ಮುರುಗಣ್ಣನವರ್ (9480803020), ಕೆಎಸ್ಎಫ್ಸಿ ಸಹಾಯಕ ನಿರ್ದೇಶಕ ಬಸವರಾಜ್ (9449172102), ಕಾರ್ಮಿಕ ಅಧಿಕಾರಿ ಎ.ಎಂ. ಕೃಷ್ಣಮೂರ್ತಿ (8277094753), ಮೋಟಾರ್ ವಾಹನ ಪರಿವೀಕ್ಷಕ ಶರಣಪ್ಪ (9482330307), ಅಬಕಾರಿ ಪರಿವೀಕ್ಷಕ ಚಿಕ್ಕರೆಡ್ಡಿ (9886296936), ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್ ಮೂರ್ತಿ (8277150143) ಅವರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡಕ್ಕೆ ನಿಯೋಜಿಸಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ತಂಡದಲ್ಲಿ ವಾರ್ಡ್ವಾರು ಅಧಿಕಾರಿಗಳನ್ನು ನೇಮಿಸಲಾಗಿದ್ದು, ವಾರ್ಡ್ವಾರು ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬಹುದು. ಉದ್ಯೋಗ ವಿನಿಮಯ ಅಧಿಕಾರಿ ಹಟ್ಟೆಪ್ಪ-9945602881 (ವಾರ್ಡ್ ಸಂಖ್ಯೆ - 31, 32, 33, 34), ಕೆಯುಡಬ್ಲ್ಯೂಎಸ್ ಆ್ಯಂಡ್ ಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ಯೂನಿಸ್ ಪಾಷಾ-9480813141(ವಾ.ಸಂ. 1, 21, 22, 35), ಬುಡಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ್ - 9448057225 (ವಾ.ಸಂ. 17, 18, 19, 20), ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ-9448634799 (ವಾ.ಸಂ. 9, 13, 14, 15, 16, 17), ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ-8105031176 (ವಾ.ಸಂ. 7, 8, 10, 11, 12), ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜ್-9972096720 (ವಾ.ಸಂ. 5, 6), ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್-9845124205 (2, 3, 4).
ಇತರೆ ವಾರ್ಡುಗಳಿಗೆ ಸಂಬಂಧಿಸಿದ ದೂರುಗಳನ್ನು ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್-1 ತಂಡದಲ್ಲಿರುವ ಪಾಲಿಕೆ ಕಂದಾಯ ಉಪ ಆಯುಕ್ತ ಅರಿಫುದ್ದೀನ್ (9448632234), ಎಆರ್ಓ ವಿರೂಪಾಕ್ಷಪ್ಪ (9448377655), ಆರ್ಐ ಕೃಷ್ಣಮೂರ್ತಿ (9448003870) ಹಾಗೂ ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್-2 ತಂಡದಲ್ಲಿರುವ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ಮನೋಜ್ (9845589606), ಕೆಯುಐಡಿಎಫ್ಸಿಯ ಸಹಾಯಕ ಎಂಜಿನಿಯರ್ ನಾಗರಾಜ್ (9449075490) ಅವರಿಗೆ ಸಲ್ಲಿಸಬಹುದು.
ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರು ಸಲ್ಲಿಸಲು ಈ ಮೇಲ್ಕಂಡ ತಂಡದ ಅಧಿಕಾರಿಗಳ ದೂರವಾಣಿ ಇಲ್ಲವೆ ಖುದ್ದಾಗಿ ಅಥವಾ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ 08392-273229, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಸಹಾಯವಾಣಿ ಸಂಖ್ಯೆ 08392-272356 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.