ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಟ್ಟೂರು: ಮೀಸಲು ಪಡೆ ಪಥಸಂಚಲನ

Rashmi Kasaragodu
Updated On : 24 Apr 2013, 10:56 am

ಕೊಟ್ಟೂರು:  ವಿಧಾನಸಭಾ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು, ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಲು ಆತ್ಮಸ್ಥೈರ್ಯ ತುಂಬುವ ಸಲುವಾಗಿ, ರಕ್ಷಣಾ ಕಾರ್ಯಕ್ಕೆ ಬಂದಿರುವ ಒರಿಸ್ಸಾ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಸೋಮವಾರ ಸಂಜೆ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು. 84 ಸಿಬ್ಬಂದಿ ತಂಡದೊಂದಿಗೆ ಸ್ಥಳೀಯ ಪೋಲಿಸ್ ಸಹ ಇದ್ದು, ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮತದಾರರ ಗಮನ ಸೆಳೆದರು. ಸುಮಾರು 1 ತಾಸು ನಡೆದ ಪಥಸಂಚಲನದ ನೇತೃತ್ವವನ್ನು ತರಬೇತಿ ಐಪಿಎಸ್ ಅಧಿಕಾರಿ ಕಾರ್ತೀಕ್ ರೆಡ್ಡಿ, ಹಡಗಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ನಾಗರಾಜ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement