ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾಂಗ್ರೆಸ್ ಸಹವಾಸ ಸಾಕು ಜಿಪಂ ಮಾಜಿ ಸದಸ್ಯ ದೂದಾನಾಯ್ಕ ಅಭಿಪ್ರಾಯ

Rashmi Kasaragodu
Updated On : 25 Apr 2013, 11:46 am

ಹೂವಿನಹಡಗಲಿ: ರಾಜ್ಯದ ಎಲ್ಲ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಥಳೀಯರಿಗೆ ಅನ್ಯಾಯ ಮಾಡಿ ವಲಸಿಗರಿಗೆ ಮಣೆ ಹಾಕಿದ್ದು, ಮೀಸಲು ಕ್ಷೇತ್ರಗಳಾದ ಮಾಯಕೊಂಡದಲ್ಲಿ ಶಿವಮೂರ್ತಿ ನಾಯ್ಕ, ತೆರೆದಾಳದಲ್ಲಿ ಉಮಾಶ್ರೀ, ಹಗರಿಬೊಮ್ಮನಹಳ್ಳಿಯಲ್ಲಿ ಮಾರೆಣ್ಣ ಸೇರಿದಂತೆ ಹೀಗೆ ವಲಸಿಗರಿಗೆ ಟಿಕೆಟ್ ನೀಡಿ ಸ್ಥಳೀಯರನ್ನು ನಿರ್ಲಕ್ಷ್ಯ ಮಾಡಿದೆ ಎಂದು ಜಿಪಂ ಮಾಜಿ ಸದಸ್ಯ ದೂದಾನಾಯ್ಕ ನೋವಿನಿಂದ ನುಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಟಿಕೆಟ್ಗಳನ್ನು ಕೋಟಿ ಕೋಟಿ ಹಣ ನೀಡಿದವರಿಗೆ ಮಾರಾಟ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ತಳಮಟ್ಟದಿಂದ ದುಡಿದು ಪಕ್ಷ ಸಂಘಟನೆ ಮಾಡಿದವರಿಗೆ ಮಾನ್ಯತೆಯೇ ಇಲ್ಲ. ಇನ್ನುಮುಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರೋಲ್ಲ, ಪಕ್ಷ ಸಂಘಟನೆ ಮಾಡಿ ಟಿಕೆಟ್ಗಾಗಿ ಅಲೆದಾಡಿದರೂ ಕಾಂಗ್ರೆಸ್ನ ಲೂಟಿಕೋರರ ಕೋರ್ ಕಮೀಟಿ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕರಿಂದ ಹಣ ಪಡೆದು ಟಿಕೆಟ್ ನೀಡಿದ್ದಾರೆಂದು ಆರೋಪಿಸಿದರು.
ಪಿಟಿಪಿ ಹಣ ನೀಡಿದ್ದಾರೆ: ಹೂವಿನಹಡಗಲಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಮೀಸಲಾತಿಯನ್ನು ಪಕ್ಕದ ತಾಲೂಕಿನವರು ಬಂದು ಅನುಭವಿಸುವಂತೆ ಕಾಂಗ್ರೆಸ್ ಮಾಡಿದೆ. ಇಂಥವರಿಗೆ ಮತದಾರರು ಈ ಬಾರಿಯೂ ತಕ್ಕ ಪಾಠ ಕಲಿಸಲಿದ್ದಾರೆ. ರಾಹುಲ್ ಗಾಂಧಿ ಟಿಕೆಟ್ ನೀಡುವಾಗ ಕೆಲ ಮಾನದಂಡಗಳನ್ನು ಅನುಸರಿಸಬೇಕೆಂದು ಹೊರಡಿಸಿರುವ ಆದೇಶವನ್ನು ಕೆಪಿಸಿಸಿ ಗಾಳಿಗೆ ತೂರಿದೆ. ಇದರಿಂದ ಯುವ ನಾಯಕ ರಾಹುಲ್ ಗಾಂಧಿ ಕನಸನ್ನು ಕೆಪಿಸಿಸಿ ನುಚ್ಚು ನೂರು ಮಾಡಿದೆ. ಜಿಲ್ಲೆಯಲ್ಲೇ 1-2 ಸ್ಥಾನಗಳನ್ನು ಬಿಟ್ಟರೆ ಯಾವ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯ ಗಳಿಸಲು ಸಾಧ್ಯವಿಲ್ಲ ಎಂದರು.
ಕೆಜೆಪಿ ಸೇರ್ಪಡೆ: ಭಂಡ ಲೂಟಿಕೋರರ ಸಹವಾಸ ಸಾಕೆಂದು ಕಾಂಗ್ರೆಸ್ ಪಕ್ಷ ತೊರೆದು ತಾವು ಕೆಜೆಪಿ ಅಭ್ಯರ್ಥಿ ಎಲ್. ಮಧುನಾಯ್ಕರಿಗೆ ಬೆಂಬಲ ನೀಡಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದೇವೆ. ಈಗಾಗಲೇ ಕ್ಷೇತ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗಿದ್ದು, ಕ್ಷೇತ್ರದ ಬಂಡಾಯ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಕೆಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ ನಾಯ್ಕ ಯಾವುದೇ ಕಾರಣಕ್ಕೂ ಗೆಲವು ಸಾಧಿಸಲು ಬಿಡದೆ ಕೆಜೆಪಿ ಅಭ್ಯರ್ಥಿಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಿಸುತ್ತೇವೆಂದು ಕರೆ ನೀಡಿದ್ದೇವೆಂದು ಹೇಳಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement