ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಬ್ದುಲ್ ವಹಾಬ್ ರೋಡ್ ಶೋ

Lingaraj Badiger
Updated On : 26 Apr 2013, 10:54 am

ಹೊಸಪೇಟೆ: ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ಅಬ್ದುಲ್ ವಹಾಬ್ ಗುರುವಾರ ಕ್ಷೇತ್ರದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರದ ಕೆಲ ವಾರ್ಡ್‌ಗಳಲ್ಲಿ ಸಂಚರಿಸಿ ಮತ ಯಾಚನೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಈ ಕ್ಷೇತ್ರದಲ್ಲೂ ತಮ್ಮನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಅವಕಾಶ ಕಲ್ಪಿಸಿಕೊಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದ್ದು, ಕಾಂಗ್ರೆಸ್ ಗೆಲ್ಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು. ಬುಧವಾರ ರಾತ್ರಿ ನಗರದಲ್ಲಿ ಅಬ್ದುಲ್ ವಹಾಬ್ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ನಗರದ ಪಾದಕಟ್ಟೆ ಅಂಜನೇಯ ಸ್ವಾಮಿ ದೇವಸ್ಥಾನ, ಮಸೀದಿ ರಸ್ತೆ, ರಾಜವೀರ ಮದಕರಿ ನಾಯಕ ವೃತ್ತ, ಮಾರ್ಕಂಡೇಶ್ವರ ದೇವಸ್ಥಾನ, 100 ಹಾಸಿಗೆ ಆಸ್ಪತ್ರೆ ರಸ್ತೆ, ಶಾನಭಾಗ್ ವೃತ್ತದ ವರೆಗೆ ರೋಡ್ ಶೋ ನಡೆಯಿತು. ಮುಖಂಡರಾದ ಎಚ್.ಎನ್.ಎಫ್. ಅಹಮ್ಮದ್ ಇಮಾಮ್ ನಿಯಾಜಿ, ಅಬಿದ್ ಹುಸೇನ್, ಡಿ. ವೆಂಕಟರಮಣ, ಅಯ್ಯಾಳಿ ಮೂರ್ತಿ, ಅಬ್ದುಲ್ ವಹಾಬ್ ಅವರ ಪುತ್ರ ಶದಬ್ ವಹಾಬ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement