ಹಗರಿಬೊಮ್ಮನಹಳ್ಳಿಯಲ್ಲಿ ಮಳೆ
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಬೆಳಗಿನಜಾವ ತುಂತುರು ಮಳೆ ಸುರಿಯಿತು. ಆರಂಭದಲ್ಲಿ ಭಾರೀ ಗಾಳಿ, ಗುಡುಗು, ಮಿಂಚಿಢ ಅರ್ಭಟ ಇತ್ತು. ಇದನ್ನು ನೋಡಿದರೆ ಭರ್ಜರಿ ಮಳೆ ಸುರಿಯಬಹುದು ಎಂದು ಊಹಿಸಲಾಗಿತ್ತು. ಆದರೆ ಕೇವಲ ಅರ್ಭಟ ಮಾತ್ರ ಇದ್ದು, ಕೊನೆಗೆ ಜಿಟಿಜಿಟಿ ಮಳೆ ಮಾತ್ರ ಸುರಿಯಿತು.