ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಹಾಬ್‌ರಿಂದ ಹೊಸಪೇಟೆಯಲ್ಲಿ ಪ್ರಚಾರ

Mainashree
Updated On : 28 Apr 2013, 11:00 am

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ಅಬ್ದುಲ್ ವಹಾಬ್ ಶನಿವಾರ ನಗರದ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತ ಯಾಚಿಸಿದರು. ಇಲ್ಲಿನ ಅಜಾದ್‌ನಗರ, ಜೆ.ಪಿ. ನಗರ, ಬಳ್ಳಾರಿ ರಸ್ತೆ ಪ್ರದೇಶ, ಊರಮ್ಮನ ಬೈಯಲು ಪ್ರದೇಶ, ಮೂರು ಗೋರಿ ಪ್ರದೇಶ, ಜಂಬುನಾಥ ರಸ್ತೆ ಪ್ರದೇಶ, ಮೊಹಬೂಬ್ ನಗರ ಸೇರಿದಂತೆ ಇತರೆ ಕೆಲ ವಾರ್ಡ್‌ಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು. ಎಂ. ಎಸ್. ರಘು, ಮಲ್ಲಪ್ಪ, ಕೆ. ಬಡಾವಲಿ, ಖಧೀರ್ ಸಾಹೇಬ್, ಕಲ್ಲುಕಂಬ ಪಂಪಾಪತಿ, ಜಿ.ಕೆ. ಹನುಮಂತಪ್ಪ, ಬಿಸಾಟಿ ಸೋಮಪ್ಪ, ಎಚ್.ಎನ್.ಎಫ್. ಮಹಮ್ಮದ್ ಇಮಾಮ್ ನಿಯಾಜಿ, ಡಾ. ತಾರಿಹಳ್ಳಿ ವೆಂಕಟೇಶ್, ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement