ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಣದಿಂದ ಬಳ್ಳಾರಿಗರನ್ನು ಕೊಳ್ಳಲು ಸಾಧ್ಯವಿಲ್ಲ: ಶ್ರೀರಾಮುಲು

Vishwanath S
Updated On : 28 Apr 2013, 12:58 pm

ಬಳ್ಳಾರಿ: ಲಾಡ್ ಹಣಕೊಟ್ಟು ಟಿಕೆಟ್ ತಂದಿರಬಹುದು. ಆದರೆ, ಹಣಕೊಟ್ಟು ಸ್ವಾಭಿಮಾನಿ ಬಳ್ಳಾರಿ ಜನರನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ವಾಗ್ದಾಳಿ ಮಾಡಿದರು.
ಬಿಎಸ್ಸಾರ್ ಕಾಂಗ್ರೆಸ್‌ನ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಮುರುಳಿಕೃಷ್ಣ ಪರ ಸೈಕಲ್ ಓಡಿಸುವ ಮೂಲಕ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊರಗಡೆಯಿಂದ ಬಂದ ಜನರು ಎಷ್ಟು ದಿನ ಇರುತ್ತಾರೆ?ಅವರೆಲ್ಲ ದುಡ್ಡು ಕೊಟ್ಟು ಜನರನ್ನು ಕೊಳ್ಳುವುದಕ್ಕೆ ಬಂದಿದ್ದಾರೆ, ಸ್ವಾಭಿಮಾನಿ ಬಳ್ಳಾರಿ ಜನರು ಹಣಕ್ಕೆ ಬಗ್ಗುವುದಿಲ್ಲ ಎಂದರು.
ಬಳ್ಳಾರಿ ನಗರಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಹಾಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. 100 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರಕ್ಕೆ ಕುಡಿಯವ ನೀರು ಪೂರೈಕೆ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಲಿದ್ದು, ಬಳ್ಳಾರಿ ನಗರಕ್ಕೆ ದಿನದ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡಲಾಗುತ್ತದೆ. ಇನ್ನು ತಮ್ಮ ವಿರುದ್ಧ ಆರೋಪ ಮಾಡುವವರಿಗೆ ಕೊನೆ ಇಲ್ಲವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement