ಹೊಸಪೇಟೆ ನಗರದಲ್ಲಿ ಆನಂದಸಿಂಗ್ ಪ್ರಚಾರ
ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಶನಿವಾರ ಹೊಸಪೇಟೆ ನಗರದ ವಿವಿಧ ವಾರ್ಡ್ಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.
ನಗರದ ಶನಿವಾರ ಸಂತೆ, ಎಪಿಎಂಸಿ ಮಾರುಕಟ್ಟೆ ಪ್ರದೇಶ, ಸಿರಸನಕಲ್ಲು ಪ್ರದೇಶ, ಸುಡುಗಾಡು ಸಿದ್ಧರ ಕಾಲೋನಿ, ಬಳ್ಳಾರಿ ರಸ್ತೆಯ ಆಶ್ರಯ ಕಾಲೋನಿ, ಸಂಕ್ಲಾಪುರ ಗ್ರಾಮದಲ್ಲಿ ಸಂಚರಿಸಿ ಮತ ಯಾಚನೆ ನಡೆಸಿದರು. ನಂತರ ನ್ಯಾಯಾಲಯ ಆವರಣಕ್ಕೆ ತೆರಳಿ ವಕೀಲರಲ್ಲಿ ಮತ ಯಾಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ್ ಸೇರಿದಂತೆ ನಗರಸಭಾ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಇದ್ದರು.