ವಿರೂಪಾಕ್ಷಗೌಡ ಪ್ರಚಾರ
ಬಳ್ಳಾರಿ: ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುತ್ತಿಗನೂರು ವಿರೂಪಾಕ್ಷಗೌಡ ನಗರದ 22ನೇ ವಾರ್ಡ್ನ ಕಪ್ಪಗಲ್ ರಸ್ತೆ, ವಿಶ್ವೇಶ್ವರಯ್ಯ ನಗರಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿ, ಮತ ಯಾಚಿಸಿದರು. ಪಕ್ಷದ ಪ್ರಮುಖ ಕಾರ್ಯಕರ್ತರಾದ ರಾಮಲಿಂಗಪ್ಪ, ಸತೀಶ್ ಚಕ್ರವರ್ತಿ, ಹನುಮಂತಪ್ಪ, ಅನಿಲ್ ನಾಯ್ಡು, ಯೋಗಾ, ನಾಗರಾಜ್, ಮುದ್ದನಗೌಡ, ನಾಗರಾಜ್, ಮಂಜಮ್ಮ ಇತರರಿದ್ದರು.