ಶ್ರೀರಾಮುಲು ಪರ ಮುಸ್ಲಿಂ ಮುಖಂಡರ ಪ್ರಚಾರ
ಬಳ್ಳಾರಿ: ಮುಸ್ಲಿಂ ಸಮುದಾಯದ ರಾಷ್ಟ್ರೀಯ ಮುಖಂಡ ಅಬುತಾಲಿ ರೆಹಮಾನಿ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಪರವಾಗಿ ಮತ ಪ್ರಚಾರ ಕೈಗೊಂಡರು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಗ್ರಾಮೀಣ ಕ್ಷೇತ್ರಕ್ಕೆ 9 ವಾರ್ಡ್ಗಳು ಬರುತ್ತಿದ್ದು, ಇಲ್ಲಿನ ಬಹುಸಂಖ್ಯಾತ ಮುಸ್ಲಿಂ ಬಾಂಧವರನ್ನು ಸಂಪರ್ಕಿಸಿದ ಅಬುತಾಲಿ ರಹಮಾನಿ ಅವರು, ಬಿ. ಶ್ರೀರಾಮುಲು ಕೋಮು ಸೌಹಾರ್ದತೆ ಬಿಂಬಿಸುವ ನಾಯಕರಾಗಿದ್ದಾರೆ. ಅವರಲ್ಲಿ ಕಪಟತನವಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಮುಸ್ಲಿಮರನ್ನು ಕೇವಲ ಮತ ಬ್ಯಾಂಕಗಳನ್ನಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿವೆ. ಆದರೆ, ಬಿಎಸ್ಆರ್ ಪಕ್ಷದಲ್ಲಿ ಅನೇಕ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ್ದು, ಬಿಎಸ್ಆರ್ನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
24ನೇ ವಾರ್ಡಿನ ಸದಸ್ಯ ಎಂ ಗೋವಿಂದರಾಜುಲು, ಬಿಎಸ್ಆರ್ ಕಾಂಗ್ರೆಸ್ ಮುಖಂಡರಾದ ಗೋವಿಂದರಾಜುಲು, ನೂರ್ಭಾಯ್, ತಿಪ್ಪಣ್ಣ, ಚಕ್ರಿಧರ (ಬಾಬು) ಇನ್ನಿತರರು ಇದ್ದರು.