ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆರೋಗ್ಯವಂತರಿಂದ ಮಾತ್ರ ಆರೋಗ್ಯಕರ ಸಮಾಜ

Lingaraj Badiger
Updated On : 2 Aug 2013, 10:46 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 1
ವಿದ್ಯಾರ್ಥಿಗಳು ಆರೋಗ್ಯವಂತರಾಗಿ ಬೆಳೆದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕುರಿ ಶಿವಮೂರ್ತಿ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ಉಜ್ಜಯಿನಿ ಶ್ರೀ ಜಗದ್ಗುರು ಸಿದ್ದೇಶ್ವರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಸರ್ಕಾರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದಲ್ಲಿ ಮೂರು ದಿನ ಕೆನೆಭರಿತ ಹಾಲು ವಿತರಣೆಗೆ ಮುಂದಾಗಿ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಉಜ್ಜಯಿನಿ ಶಾಲೆಯ ಮುಖ್ಯ ಶಿಕ್ಷಕ ಬಿ. ಮಂಜುನಾಥ, ವಾಲ್ಮೀಕಿ ಮಹಾಸಭಾದ ಹೋಬಳಿ ಅಧ್ಯಕ್ಷ ತಳವಾರ್ ಹುಲುಗಪ್ಪ, ಸ್ಥಳೀಯ ಮುಖಂಡರಾದ ಮುಗ್ಲಿ ರಾಮಾಂಜಿನೇಯ, ಆಡೂರ್ ವೀರೇಶ್‌ಸ್ವಾಮಿ, ಬಿ.ಎಂ.ಎಸ್. ಕೊಟ್ರೇಶ್, ಶಿಕ್ಷಕ ಮರಿಗೌಡ, ಜಾಗೀರ್‌ದಾರ್ ಭಾಗವಹಿಸಿದ್ದರು.
ಮರಿಯಮ್ಮನಹಳ್ಳಿ: ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಸುಭಾನ್ ಚಾಲನೆ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮಿ ಬಸಪ್ಪ ಪೂಜರ್, ತಾ.ಪಂ. ಸದಸ್ಯ ಯು. ಸೋಮಪ್ಪ, ಗ್ರಾ.ಪಂ. ಸದಸ್ಯ ಬಾಣದ ಯಮನೂರ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸುನೀತಾ ಅಣ್ವೇಕರ್ ಭಾಗವಹಿಸಿದ್ದರು.
ಗುಂಡಾಗ್ರಾಮದಲ್ಲಿ: ತಾಲೂಕಿನ ಗುಂಡಾಗ್ರಾಮದಲ್ಲಿ ಗ್ರಾಪಂ ಸದಸ್ಯ ದಳವಾಯಿ ಸೋಮಣ್ಣ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಗ್ರಾಪಂ ಸದಸ್ಯ ಎಂ. ವೆಂಕಟೇಶ್, ಮುಖ್ಯ ಶಿಕ್ಷಕ ಪ್ರಭಾಕರ, ಎಸ್‌ಡಿಎಂಸಿ ಅಧ್ಯಕ್ಷ ವಿ. ಎರ್ರಿಸ್ವಾಮಿ, ಸಿ ಆರ್‌ಪಿ ದ್ಯಾಮಪ್ಪ ವಾಲ್ಮೀಕಿ, ಸ್ಥಳೀಯ ಮುಖಂಡರಾದ ಅಂಚಿನಗುಡಿ ಎರ್ರಿಸ್ವಾಮಿ, ಪೂಜಾರಿ ಎರ್ರಿಸ್ವಾಮಿ, ಬಸಯ್ಯ ಇದ್ದರು.
ಹನುಮನಹಳ್ಳಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ. ವೆಂಕಟೇಶ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಸ್ಥಳೀಯ ಗ್ರಾಪಂ ಸದಸ್ಯ ವಿ. ಅಂಜಿನಪ್ಪ, ಮುಖ್ಯ ಶಿಕ್ಷಕ ಎಚ್.ಎಂ. ಕರಿಬಸಯ್ಯಸ್ವಾಮಿ, ಸಿಆರ್‌ಪಿ ಕೆ. ತಿಂದಪ್ಪ, ಸ್ಥಳೀಯ ಮುಖಂಡರಾದ ಗಣೇಶ್, ದುರುಗಪ್ಪ, ಮಾರುತಿ, ನಾಗರಾಜ ಮಜ್ಜಿಗೆ, ಕೆ. ಪಂಪಾಪತಿ, ಕೆ. ಹನುಮಂತಪ್ಪ ಇದ್ದರು.
ಜಿ. ನಾಗಲಾಪುರ: ತಾಲೂಕಿನ ಜಿ. ನಾಗಲಾಪುರ ಗ್ರಾಮದಲ್ಲಿ ತಾಪಂ ಸದಸ್ಯ ಎಚ್.ಲಕ್ಷ್ಮಣ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಗ್ರಾಪಂ ಸದಸ್ಯರಾದ ನಿಂಗಮ್ಮ, ಈರಮ್ಮ, ಯಂಕಪ್ಪ, ಗಿರಿರಾಜ್, ಸುಂಕದ ಬಸವರಾಜ ಇದ್ದರು.
ಗೊಲ್ಲರಹಳ್ಳಿ ಗ್ರಾಮ: ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದಾಸರ ವೆಂಕಟೇಶ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ, ಸ್ಥಳೀಯ ಮುಖಂಡರಾದ ಅಡವಿಬಸಪ್ಪ, ಅಂಜಿನಪ್ಪ, ಕೆ. ವೆಂಕಟೇಶ್, ರಾಜಕುಮಾರ್, ಕೊಟ್ರೇಶ್, ಡಾ. ನಾಗರಾಜ, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement