ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾತಿ ನಿಂದನೆ: ಕುಲಪತಿ ಅಮಾನತಿಗೆ ಆಗ್ರಹ

Lingaraj Badiger
Updated On : 2 Aug 2013, 10:45 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 1
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ. ವಿಜಯಕುಮಾರ್ ಮೇಲೆ ಜಾತಿ ನಿಂದನೆ ಮಾಡಿರುವ ಕುಲಪತಿ ಡಾ. ಮಂಜಪ್ಪ ಡಿ. ಹೊಸಮನಿ ಅವರನ್ನು ತಕ್ಷಣವೇ ಅಮಾನತುಗೊಳಿಸಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ)ಯ ಜಿಲ್ಲಾ ಘಟಕ ಆಗ್ರಹಿಸಿದೆ.
ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಉನ್ನತ ಸ್ಥಾನದಲ್ಲಿರುವ ಕುಲಸಚಿವರ ಮೇಲೆ ಜಾತಿ ನಿಂದನೆ ಮಾಡಿರುವುದು ನೋವಿನ ಸಂಗತಿಯಾಗಿದ್ದು, ಎಲ್ಲ ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸುವ ಕೇಂದ್ರಗಳಾಗಬೇಕಾದ ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯ ಜಾತಿ ನಿಂದನೆಯಂಥ ಅಮಾನವೀಯ ಕೃತ್ಯ ನಡೆದಿರುವುದು ವಿಚಾರವಂತ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಹೋರಾಟದ ಎಚ್ಚರಿಕೆ: ಈ ಹಿನ್ನೆಲೆಯಲ್ಲಿ ವಿವಿಯ ಕುಲಸಚಿವ ಡಾ. ಮಂಜಪ್ಪ ಡಿ. ಹೊಸಮನಿ ಅವರನ್ನು  ರಾಜ್ಯಪಾಲರು ತಕ್ಷಣವೇ ಅಮಾನತುಗೊಳಿಸಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ವಿಎಸ್‌ಕೆಯುನ ಕುಲಸಚಿವ ಡಾ. ಕೆ. ವಿಜಯಕುಮಾರ್ ಅವರಿಗೆ ಸಹಜವಾಗಿ ಸಿಗಬೇಕಾದ ಎಲ್ಲ ಅಧಿಕಾರವನ್ನು ನೀಡಿ, ವಿಶ್ವವಿದ್ಯಾಲಯಗಳ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಬಳ್ಳಾರಿಯ ಎಲ್ಲ ದಲಿತ ಪರ ಸಂಘಟನೆಗಳು ಒತ್ತಾಯಿಸುತ್ತವೆ. ಡಾ. ಕೆ. ವಿಜಯಕುಮಾರ್ ಅವರಿಗೆ ನ್ಯಾಯ ದೊರಕಿಸದಿದ್ದಲ್ಲಿ ದಲಿತರೆಲ್ಲ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಅಂಬೇಡ್ಕರ್ ವಾದ)ಯ ಜಿಲ್ಲಾ ಸಂಚಾಲಕ ವೆಂಕಟೇಶ್, ಎಲ್ಲಪ್ಪ, ಚೌದ್ರಿ ಶ್ರೀನಾ, ಮಲ್ಲಿಕಾರ್ಜುನ, ಮಹೇಂದ್ರ, ನೆಟ್ಟೆಪ್ಪ, ಮಹೇಂದ್ರ, ಪಾಲಾಕ್ಷ, ಸೀತಾರಾಮ, ಎಚ್. ಬಸವರಾಜ, ತಿಪ್ಪೇಸ್ವಾಮಿ, ವಿಶ್ವ, ಪ್ರಶಾಂತ, ಭಾಸ್ಕರ್, ದುರ್ಗಣ್ಣ, ತಿರುಮಲಮ್ಮ, ಶ್ರೀನಿವಾಸ, ದೇವರಾಜ, ಮಲ್ಲಿಕಾರ್ಜುನ, ರಘು, ಈಶ, ಮಹೇಶ್, ಮಂಜುನಾಥ್, ಲೀಲಾವತಿ, ಪದ್ಮಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement