ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಧ್ಯಸ್ಥಿಕೆದಾರರಿಂದ ವ್ಯಾಜ್ಯಗಳ ಶೀಘ್ರ ವಿಲೇವಾರಿ

Mainashree
Updated On : 4 Aug 2013, 1:10 am

ಬಳ್ಳಾರಿ: ಮಧ್ಯಸ್ಥಿಕೆದಾರರಿಂದ ಶೀಘ್ರವಾಗಿ ವ್ಯಾಜ್ಯಗಳ ವಿಲೇವಾರಿಯಾಗಲಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತಿಳಿಸಿದರು.
ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಬಳ್ಳಾರಿ ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ಮಧ್ಯಸ್ಥಿಕೆದಾರರಿಗೆ ಮರು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಈ ತರಬೇತಿಯು ಮಧ್ಯಸ್ಥಿಕೆದಾರರ ಹಾಗೂ ಕಕ್ಷಿದಾರರ ನಡುವೆ ಕೊಂಡಿಯಂತಿರುವ ಸಮಯವಾಗಿದೆ. ಕಕ್ಷಿದಾರರಿಗೆ ತಿಳಿವಳಿಕೆ ನೀಡಿ, ಕ್ಲಿಷ್ಟಕರವಾದ ಪ್ರಕರಣಗಳನ್ನು ಸಹ ಕಾನೂನಿನ ರೀತಿಯಿಂದ ಸುಲಲಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಉಚಿತವಾಗಿ ಕಾನೂನಿನ ಎಲ್ಲ ಅಂಶಗಳ ಬಗ್ಗೆ ತಿಳಿವಳಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು. ಮಾಸ್ಟರ್ ಟ್ರೈನರ್ ಪ್ರಸಾದ್ ಸುಬ್ಬಣ್ಣ ಮಾತನಾಡಿ, ಯಾವುದೇ ಪ್ರಕರಣವನ್ನು ಯಾವ ರೀತಿ ಮುಕ್ತಾಯಗೊಳಿಸಬಹುದು. ಯಾವ ರೀತಿ ಕಕ್ಷಿದಾರರೊಂದಿಗೆ ಮಾತುಕತೆ ನಡೆಸಬೇಕು ಎನ್ನುವ ಬಗ್ಗೆ ವಿವರವಾಗಿ ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ್ ಮಾತನಾಡಿ, ಎಲ್ಲ ಮಧ್ಯಸ್ಥಿಕೆದಾರರು ಉತ್ತಮವಾಗಿ ತರಬೇತಿ, ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕೆನ್ನುವ ಪರಿಣತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಎಂ.ಎಸ್. ಪಾಟೀಲ್, ಎಂ.ಎಲ್. ರಘುನಾಥ, ಎಂ.ಬಿ. ಕುಲಕರ್ಣಿ, ಎಂ. ರಮೇಶ್, ಯಮನಪ್ಪ, ಝರೀನಾ, ಲತಾ, ಶೀಲಾಕೃಷ್ಣ, ಸುಮನ್ ಹೆಗಡೆ, ವಕೀಲರ ಸಂಘದ ಕಾರ್ಯದರ್ಶಿ ಡಿ.ಎಸ್. ಬದರಿನಾಥ ಹಾಗೂ 70ಕ್ಕೂ ಹೆಚ್ಚು ಮಧ್ಯಸ್ಥಿಕೆದಾರರು ಇದ್ದರು. ಸಿಜೆಎಂ ಎಂ.ಎಚ್. ಶಾಂತಾ ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ಎರ್ರಿಗೌಡ ನಿರೂಪಿಸಿದರು. ಖಜಾಂಚಿ ಟಿ.ಎಂ. ಜಡೇಶ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement