ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶ್ರೀಕಾಂತ್ ಕರ್ತವ್ಯನಿಷ್ಠೆ ಮಾದರಿ: ನಾಗರಾಜ್

Mainashree
Updated On : 4 Aug 2013, 1:09 am

ಹೂವಿನಹಡಗಲಿ: ಚುನಾವಣೆಗಳು ಸೇರಿದಂತೆ ತಾಲೂಕಿನ ಐತಿಹಾಸಿಕ ಜಾತ್ರೆಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಕರ್ತವ್ಯ ನಿಷ್ಠೆ ಮೆರೆದಿರುವ ಸಿಪಿಐ ಶ್ರೀಕಾಂತ ಕಟ್ಟಿಮನಿ ಅವರ ತಾಳ್ಮೆ ಮತ್ತು ಸಂಯಮ ಠಾಣೆಯ ಪೊಲೀಸ್ ಸಿಬ್ಬಂದಿಗೆ ಮಾದರಿಯಾಗಿದೆ ಎಂದು ಡಿವೈಎಸ್ಪಿ ಡಿ. ನಾಗರಾಜ ಹೇಳಿದರು. ತಾಲೂಕಿನ ಆರಕ್ಷಕ ವೃತ್ತದಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಶ್ರೀಕಾಂತ ಕಟ್ಟಿಮನಿ ಅವರನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಶುಕ್ರವಾರ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಹಸೀಲ್ದಾರ್ ವಿಜಯಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇರುವ ಗುಣಗಳೊಂದಿಗೆ ಕೆಲ ವಿಶೇಷ ಗುಣಗಳನ್ನು ಮೈಗೂಡಿಸಿಕೊಂಡಿರುವ ಕಟ್ಟಿಮನಿಯವರ ಸೇವೆ ನಿರಂತರವಾಗಿ ನೆನಪಿನಲ್ಲಿ ಉಳಿಯುಂತೆ ಮಾಡಿದೆ ಎಂದರು. ಸನ್ಮಾನ ಸ್ವೀಕರಿಸಿದ ಶ್ರೀಕಾಂತ ಕಟ್ಟಿಮನಿ ಮಾತನಾಡಿ, ಇಲಾಖೆಯ ಕರ್ತವ್ಯ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾತ್ರಕ್ಕಿಂತ ಸಿಬ್ಬಂದಿಯ ಶ್ರಮ ಹೆಚ್ಚಿನದಾಗಿರುತ್ತದೆ. ಸಿಬ್ಬಂದಿ,  ಸಾರ್ವಜನಿಕರ ಸಹಕಾರದೊಂದಿಗೆ ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು.  ಕಾರ್ಯಕ್ರಮದಲ್ಲಿ ಹಿರೇಹಡಗಲಿ ಪಿಎಸ್‌ಐ ಮಹೇಂದ್ರಕುಮಾರ್, ಎಎಸ್‌ಐ ಧರ್ಮಣ್ಣ, ಹರಿದಾಸ್, ಪೇದೆಗಳಾದ ಪ್ರಕಾಶ್, ರವಿಕುಮಾರ್, ಮಧುಸೂದನ್, ಪತ್ರಕರ್ತ ಎಸ್.ಎಂ. ಬಸವರಾಜ, ಪುತ್ರೇಶ್, ಶಿವರಾಜ್ ಇತರರು ಮಾತನಾಡಿದರು. ಇಟ್ಟಿಗಿ ಪಿಎಸ್‌ಐ ಮಹಮ್ಮದ್ ರಫಿ ನಿರೂಪಿಸಿದರು. ಹಡಗಲಿ ಪಿಎಸ್‌ಐ ಎಂ.ಎಸ್. ಆಂಜನೇಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement