ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 4 Aug 2013, 1:10 am

ಸಂಗೀತ-ನಮನ
ಹೊಸಪೇಟೆ: ಹೊಸಪೇಟೆಯ ಗಂಧರ್ವ ವಾದ್ಯಗೋಷ್ಠಿಯವರಿಂದ ಡಾ. ಪಿ.ಬಿ. ಶ್ರೀನಿವಾಸ ಅವರ ಸ್ಮರಣಾರ್ಥವಾಗಿ ಸಂಗೀತ-ನಮನ ಕಾರ್ಯಕ್ರಮವು ನಗರದ ಟೌನ್ ರೀಡಿಂಗ್ ರೂಂ ಆವರಣದಲ್ಲಿ ಆ. 4ರಂದು ಸಂಜೆ 6.30ಕ್ಕೆ ನಡೆಯಲಿದೆ. ಜೂನಿಯರ್ ಡಾ. ರಾಜ್‌ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್‌ನಾಗ್ ಸೇರಿದಂತೆ ಗಂಧರ್ವ ವಾದ್ಯಗೋಷ್ಠಿಯ ಕಲಾವಿದರಿಂದ ಕೆಲ ಗಾಯಕರಿಂದ ಹಳೆಯ ಚಲನಚಿತ್ರ ಗೀತೆಗಳನ್ನಾಧರಿಸಿದ ಸುಮಧುರ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿದೆ ಎಂದು ಗಂಧರ್ವ ವಾದ್ಯಗೋಷ್ಠಿಯ ಮುಖ್ಯಸ್ಥ ಯಲ್ಲಪ್ಪ ಭಂಡಾರದಾರ್ ತಿಳಿಸಿದ್ದಾರೆ.
ಇಂದು ಸಭೆ
ಬಳ್ಳಾರಿ: ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ನಿಮಿತ್ತ ಆ. 4ರಂದು ಬೆಳಗ್ಗೆ 11ಕ್ಕೆ ವಿದ್ಯಾಲಯದಲ್ಲಿ ಹಳೇ ವಿದ್ಯಾರ್ಥಿಗಳ ಸಭೆ ಜರುಗಲಿದೆ. ಈ ನಿಟ್ಟಿನಲ್ಲಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಎಲ್ಲ ವಿದ್ಯಾರ್ಥಿಗಳು ಸಭೆಗೆ ಆಗಮಿಸಬೇಕೆಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ಕಳ್ಳತನ
ಬಳ್ಳಾರಿ: ಇಲ್ಲಿನ ವಡ್ಡರಬಂಡೆಯ ಬಾಲಾಜಿ ರಸ್ತೆಯ ಬಲಿಜ ಸಂಘದ ಕಚೇರಿಯ ಸಮೀಪ ಬೈಕ್‌ವೊಂದು ಕಳ್ಳತನವಾಗಿದೆ. ಈ ಕಚೇರಿಯ ಸಮೀಪ ಜೂ. 26ರಂದು ಬೆಳಗ್ಗೆ 11.30ಕ್ಕೆ ಹೀರೋ ಹೋಂಡಾ ಫ್ಯಾಷನ್ ಪ್ಲಸ್ ಬೈಕ್‌ನ್ನು ನಿಲ್ಲಿಸಿ, ಅನಂತರ ಕಚೇರಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 12.30ಕ್ಕೆ ಬಂದು ನೋಡಿದರೆ, ಸ್ಥಳದಲ್ಲಿ ಬೈಕ್ ಇರಲಿಲ್ಲ ಎಂದು ಬೈಕ್‌ನ ಮಾಲೀಕ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಟ್ಕಾ: ಬಂಧನ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಪಟ್ಟಣದ ಬಾಣದಕೇರಿಯ ಗರಡಿ ಮನೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಓರ್ವನನ್ನು ಬಂಧಿಸಿ, ಆತನಿಂದ ರು. 2,420 ಮತ್ತು ಮಟ್ಕಾ ಚೀಟಿ ವಶಪಡಿಸಿಕೊಂಡಿದ್ದಾರೆ. ಹೊಸಪೇಟೆ ಪೊಲೀಸ್ ಠಾಣೆಯ ಪಿಐ, ಎಎಸ್‌ಐ ಹಾಗೂ ಸಿಬ್ಬಂದಿ ದಾಳಿ ಮಾಡಿ, ಹನುಮಂತಪ್ಪ ಎಂಬುವನನ್ನು ಬಂಧಿಸಿದ್ದಾರೆ. ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement