ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮನವಿ

Vishwanath S
Updated On : 5 Aug 2013, 12:07 pm

ಬಳ್ಳಾರಿ: ತಾಲೂಕಿನ ಮೋಕ ಗ್ರಾಮದಲ್ಲಿ ಒತ್ತುವರಿಯಾಗಿರುವ ರಸ್ತೆಗಳನ್ನು ತೆರವುಗೊಳಿಸಿ, ಅಗಲೀಕರಣಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮದ ದಸ್ತಗಿರಿಸಾಬ್, ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಇರುವ ಮುಖ್ಯರಸ್ತೆ, ಖಬರಸ್ಥಾನಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಒತ್ತುವರಿಯಾಗಿವೆ. ಸಾರ್ವಜನಿಕರು, ಎತ್ತಿನಗಾಡಿ ಮತ್ತು ಲಘುವಾಹನಗಳ ಸಂಚಾರಕ್ಕಾಗಿ ಬಿಟ್ಟಿದ್ದ ಸುಮಾರು 40 ಅಡಿ ಇದ್ದ ಖಬರ್‌ಸ್ಥಾನ ರಸ್ತೆಯನ್ನು ಪಕ್ಕದ ನಿವಾಸಿಗಳು ಸುಮಾರು 40 ಅಡಿ ಕಬಳಿಸಿದ್ದು, ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಸಾರ್ವಜನಿಕರು ಸಂಚರಿಸಲು ತೊಂದರೆ ಪಡುತ್ತಿದ್ದಾರೆ. ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಪವಿತ್ರ ರಂಜಾನ್ ಹಬ್ಬವಿದ್ದು, ಪ್ರತಿಯೊಬ್ಬ ಮುಸಲ್ಮಾನರೂ ಇದೇ ರಸ್ತೆಯಲ್ಲಿ ಸಂಚರಿಸುವರು. ಅಲ್ಲದೇ, ಸಮಾಜದ ಯಾರಾದರೂ ಮೃತಪಟ್ಟರೆ, ಈ ರಸ್ತೆ ಮೂಲಕವೇ   ಖಬರಸ್ಥಾನಕ್ಕೆ ತೆರಳಿ ಶವ ಸಂಸ್ಕಾರ ಮಾಡಬೇಕಿದ್ದು, ತೊಂದರೆಯಾಗುತ್ತಿದೆ. ಹೀಗಾಗಿ ಒತ್ತುವರಿ ರಸ್ತೆ ತೆರವುಗೊಳಿಸಿ, ಅಗಲೀಕರಣಗೊಳಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ ಎಂದು ದಸ್ತಗಿರಿಸಾಬ್ ಮನವಿಯಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement