ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸೆ. 15ಕ್ಕೆ ರಾಜ್ಯ ಮಟ್ಟದ ವಧು, ವರರ ಸಮಾವೇಶ

Lingaraj Badiger
Updated On : 6 Aug 2013, 11:57 am

ಬಳ್ಳಾರಿ: ಕರ್ನಾಟಕ ಮನ್ಸೂರಿ, ಪಿಂಜಾರ ಸಂಘವು, ಜಿಲ್ಲಾ ನವ ವಧು-ವರರ ಅನ್ವೇಷಣ ಘಟಕದ ಸಹಯೋಗದೊಂದಿಗೆ ಸೆಪ್ಟೆಂಬರ್ 15ರಂದು ಬೆಳಗ್ಗೆ 11ಕ್ಕೆ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಮನ್ಸೂರಿ, ಪಿಂಜಾರ, ನದಾಫ ಸಮಾಜದ ರಾಜ್ಯ ಮಟ್ಟದ ನವ ವಧು-ವರರ ಸಮ್ಮೇಳನ ಏರ್ಪಡಿಸಿದೆ. ಕಾರ್ಯಕ್ರಮವನ್ನು ಕರ್ನಾಟಕ ಮನ್ಸೂರಿ, ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಅಲ್ ಹಾಜ ಕಪ್ಪಗಲ್ ರಸೂಲ್ ಸಾಬ್ ಮನ್ಸೂರಿ ಉದ್ಘಾಟಿಸಲಿದ್ದಾರೆ. ಅಲ್ ಹಾಜ್ ಮಹಮ್ಮದ್ ಸಾಬ್ ನದಾಫ ಅಧ್ಯಕ್ಷತೆ ವಹಿಸುವರು. ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಇತ್ತೀಚಿನ ಎರಡು ಭಾವಚಿತ್ರ, ವ್ಯಕ್ತಿ ಪರಿಚಯ ಅಥವಾ ಮಾಹಿತಿಯನ್ನು ಅಂಚೆ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮನ್ಸೂರಿ, ಪಿಂಜಾರ ಸಂಘ, ಹಳೇ ರಾಯದುರ್ಗ ಬಸ್ ನಿಲ್ದಾಣ, ಬೆಂಗಳೂರು ರಸ್ತೆ, ಬಳ್ಳಾರಿ-583101, ಮೊ.ಸಂ. 9945833752, 9481712378, 9008008246ಗೆ ಸಂಪರ್ಕಿಸಬಹುದು ಎಂದು ಸಂಘದ ಅಲಿಮುರ್ತುಜಾ ಪಿಂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement