ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಣಿತ ಎಲ್ಲದಕ್ಕೂ ಅವಶ್ಯ

Vishwanath S
Updated On : 7 Aug 2013, 10:57 am

ಹೊಸಪೇಟೆ: ಗಣಿತವು ಕೇವಲ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಸಾಮಾನ್ಯ ಜನರ ಬದುಕಿಗೂ ಪೂರಕವಾಗಿದೆ. ಜೀವನದ ಪ್ರತಿ ಹಂತದಲ್ಲಿ ಗಣಿತವು ತನ್ನ ಕಬಂಧಬಾಹುವನ್ನು ಚಾಚಿದೆ ಎಂದು ವ್ಯಾಸನಕೆರೆಯ ಸ್ಮಯೋರ್ ಶಿಕ್ಷಣ ಕೇಂದ್ರದ ನಿರ್ದೇಶಕಿ ಯಶೋಧರಾ ದೇವಿ ಘೋರ್ಪಡೆ ಹೇಳಿದರು.
ತಾಲೂಕಿನ ವ್ಯಾಸನಕೆರೆ ಸ್ಮಯೋರ್ ವ್ಯಾಸಪುರಿಯ ಎಸ್‌ಈಆರ್‌ಎಸ್ ಬಾಲಕಿಯರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರ್ ಶಾಲಾ ಸಂಪೂರ್ಣ ಎಂಬ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಬದುಕಿನಲ್ಲಿ ಗಣಿತದ ಆಟ ಬಹು ಪ್ರಮುಖ ಪಾತ್ರ ವಹಿಸಿದೆ. ನಿತ್ಯ ಬದುಕಿನ ಜಂಜಾಟದಲ್ಲಿ ಗಣಿತವಿಲ್ಲದೇ ಯಾರ ಜೀವನವೂ ಸಾಗುವುದಿಲ್ಲ. ಒಂದರ್ಥದಲ್ಲಿ ಗಣಿತ ಲೆಕ್ಕಾಚಾರದ ಪ್ರಕಾರವೇ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಇಂದಿನ ಕೆಲ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ ಎಂಬ ಭಾವನೆ ಬೇರೂರಿರುವುದರಿಂದ ಕೆಲವರು ಗಣಿತವನ್ನು ನಿರ್ಲಕ್ಷಿಸುತ್ತಾರೆ. ಗಣಿತ ಲೆಕ್ಕಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಅತ್ಯಂತ ಸುಲಭವಾಗಲಿದೆ ಎಂದರು.
ಈ ವರ್ಷವೂ ಅಂತಾರಾಷ್ಟ್ರೀಯ ಭೂಗ್ರಹದ ಗಣಿತದ ವರ್ಷ ಎಂದು ಘೋಷಿಸಿರುವುದರಿಂದ ಇಂದಿನ ಸ್ಪರ್ಧಾ ಕಾರ್ಯಕ್ರಮವು ಗಣಿತದ ಮೇಲೆ ಕೇಂದ್ರೀಕೃತವಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ಒಟ್ಟು 13 ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಪೂರ್ಣ ಸಮಗ್ರ ಪ್ರಶಸ್ತಿಯನ್ನು ಸಂಡೂರು ವಸತಿ ಶಾಲೆ ಮತ್ತು ಹೊಸಪೇಟೆಯ ಜೀಸಸ್ ಶಾಲೆಗಳು ಸಮನಾಗಿ ಹಂಚಿಕೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement