7ನೇ ದಿನಕ್ಕೆ ಕಾಲಿಟ್ಟ ಧರಣಿ
ಗುಲ್ಬರ್ಗ: ಪರಿಷ್ಕೃತ 5ನೇ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹೈ.ಕ. ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ಮಹಾವಿದ್ಯಾಲಯದ ಶಿಕ್ಷಕರು ಲೇಖನಿ ಸ್ಥಗಿತಗೊಳಿಸಿ ಗುಲ್ಬರ್ಗದಲ್ಲಿ ನಡೆಸುತ್ತಿರುವ ಹೋರಾಟ ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ.
ಸಂಸ್ಥೆಯ ಕಾರ್ಯದರ್ಶಿಗಳು, ಕಾಲೇಜಿನ ಸಂಚಾಲಕರು, ಆಡಳಿತ ಮಂಡಳಿಯ ಸದಸ್ಯರು ಮಾತುಕತೆಗೆ ಮುಂದಾಗಿ ಷರತ್ತುಗಳಿಲ್ಲದೆ ಹಿಂತೆಗೆಯಲು ಹೇಳಿದರು. ಹೀಗಾಗಿ ಮಾತುಕತೆ ವಿಫಲವಾಗಿದ್ದು, ಹೋರಾಟ ಮುಂದುವರೆದಿದೆ.
ಧರಣಿನಿರತ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಡಾ. ಶಿವಾನಂದ ಭೀಮಳ್ಳಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಲೇಖನಿ ಸ್ಥಗಿತಗೊಳಿಸಿ ರುವ ಧರಣಿಯಲ್ಲಿ ಬೋಧಕ ಸಿಬ್ಬಂದಿ ಭಾಗವಹಿಸಿದ್ದರು.