ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೀಳರಿಮೆ ತೊರೆದು ಮುನ್ನಡೆಯಿರಿ

Vishwanath S
Updated On : 8 Aug 2013, 12:03 pm

ಕನ್ನಡಪ್ರಭ ವಾರ್ತೆ ,  ಚಿತ್ತಾಪುರ ,  ಆ.7
ಪ್ರತಿಯೊಬ್ಬ ಅಂಗವಿಕಲನಲ್ಲಿ ಯಾವುದಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಹೀಗಾಗಿ ನಾನು ದುರ್ಬಲ, ಅಶಕ್ತ ಎಂದು ಭಾವಿಸಿಕೊಳ್ಳದೆ ತನ್ನಲ್ಲಿಯ ಸಾಮರ್ಥ್ಯವನ್ನು ಹೊರಹಾಕುವ ಪ್ರಯತ್ನ ಮಾಡಬೇಕು, ಈ ನಿಟ್ಟಿನಲ್ಲಿ ಜೀವನದಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶ ಡಿ.ಪಿ ನಾಯಕ ಕರೆ ನೀಡಿದರು.
  ಇಲ್ಲಿಯ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದೈಹಿಕ ಮತ್ತು ಮಾನಸಿಕ ಅಂಗವಿಕಲರ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
   ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಕೆ.ಎಸ್. ರೊಟ್ಟೇರ್ ಮತ್ತು ತಾಪಂ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಗಂಗಾಧರ ಸಾಲಿಮಠ, ಸರ್ಕಾರಿ ಸಹಾಯಕ ಅಭಿಯೋಜಕ ಬಸವಂತರೆಡ್ಡಿ ಪಾಟೀಲ್ ಮಾತನಾಡಿದರು.
  ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ, ನ್ಯಾಯವಾದಿ ನಾಗರಾಜ ಕಡಬೂರ, ಎ.ಎಂ.ಅವಂಟಿ, ಸಾಯಿಬಣ್ಣ ಹೋಳಿ, ಮಲ್ಲಿಕಾರ್ಜುನ, ಅಂಗವಿಕಲರ ಕಾರ್ಯಕರ್ತರಾದ ಮಲ್ಲಿಕಾರ್ಜುನ, ಅಯೂಬ್ ರಾಜಾಪುರ, ರಾಜೇಂದ್ರ ಅಲ್ಲೂರ, ಯಶವಂತ ಗೋಟೂರ್, ಪರವೇಜ್ ನಾಲವಾರ, ಇಬ್ರಾಹಿಂ ರಾವೂರ, ದೇವಿಂದ್ರ ಹಲಕಟ್ಟಾ, ಶರಬಣ್ಣ, ಚಾಂದಪಾಶಾ ಕಡಬೂರ ಸೇರಿದಂತೆ ಅಂಗನವಾಡಿ ಕಾಯಕರ್ತೆಯರು ಉಪಸ್ಥಿತರಿದ್ದರು.
  ಇದೇ ಸಂದರ್ಭದಲ್ಲಿ ಅರ್ಹ ಅಂಗವಿಕಲರಿಗೆ ಮಾಸಾಶನ ಆದೇಶದ ಪ್ರತಿಗಳನ್ನು ವಿತರಣೆ ಮಾಡಲಾಯಿತು.  ಶಿಕ್ಷಕ ದೇವಪ್ಪ ನಂದೂಕರಕರ್ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement