ಜವಳಿ ಸಚಿವರ ಪರಿಷ್ಕೃತ ಪ್ರವಾಸ
ಗುಲ್ಬರ್ಗ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ ಆ.9 ರಂದು ಸಂಜೆ 7ಕ್ಕೆ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಆ.10 ರಂದು ಯಾದಗಿರಿಲ್ಲಿ ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವರು. ಸಂಜೆ 7ಕ್ಕೆ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಆ.11 ರಂದು ಮಧ್ಯಾಹ್ನ 2ಕ್ಕೆ ಹೊಸಪೇಟೆಗೆ ಪ್ರಯಾಣಿಸಿ ವಾಸ್ತವ್ಯ ಮಾಡುವರು. ಆ.12 ರಂದು ಹೊಸಪೇಟೆಯ ಮುದ್ದಾಪುರ ಗ್ರಾಮದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುಲ್ಬರ್ಗಕ್ಕೆ 10ಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ಆ.13 ಹಾಗೂ 14ರಂದು ಬೆಳಿಗ್ಗೆ 11ಕ್ಕೆ ಕೆಐಎಡಿಬಿ ವತಿಯಿಂದ ಕಡೆಚೂರು ಮತ್ತು ಬಾಡಿಯಾಳ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಗ್ರಾಮಸ್ಥರಿಗೆ ಪರಿಹಾರ ಧನ ವಿತರಿಸುವ ಕಾರ್ಯಕ್ರಮ ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿರುವ ಸಭೆಯಲ್ಲಿ ಭಾಗವಹಿಸಿ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ಆ.15 ರಂದು ಬೆಳಿಗ್ಗೆ 7ಕ್ಕೆ ಯಾದಗಿರಿಗೆ ಪ್ರಯಾಣಿಸಿ ಯಾದಗಿರಿಯಲ್ಲಿ ಏರ್ಪಡಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 7ಕ್ಕೆ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.