ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಾಕ್ ಸೇನೆ ದುಷ್ಕೃತ್ಯ ಖಂಡಿಸಿ ಪ್ರತಿಭಟನೆ

Vishwanath S
Updated On : 8 Aug 2013, 12:02 pm

ಗುಲ್ಬರ್ಗ: ಐದು ಜನ ಭಾರತೀಯ ಯೋಧರ ಹತ್ಯೆಗೈದ ಪಾಕ್ ಸೇನೆಯ ದುಷ್ಕೃತ್ಯ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಹಿಂದು ಜಾಗರಣ ವೇದಿಕೆಗಳ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭಯೋತ್ಪಾದಕರು ಮತ್ತು ಪಾಕ್ ಸೈನಿಕರು ಭಾರತದ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಜಮ್ಮು- ಕಾಶ್ಮೀರದ ಗಡಿ ಜಿಲ್ಲೆಯಾದ ಪೂಂಚ್ ಜಿಲ್ಲೆಯಲ್ಲಿ ಭಾರತದ ಸೈನಿಕರ ಮೇಲೆ ದಾಳಿ ನಡೆಸಿ ಐವರು ಯೋಧರನ್ನು ಬಲಿ ತೆಗೆದುಕೊಂಡಿದ್ದು, ಯೋಧರ ಮೇಲೆ ನಡೆದ ಈ ದಾಳಿಯನ್ನು ತಡೆಯುವಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಪ್ರವೀಣ ನಾಯಕ, ಜಯ ಪ್ರಕಾಶ, ಮಂಜು ಹತ್ತಿ, ವಿದ್ಯಾನಂದ, ಆನಂದ ಮತ್ತು ಜಾಗರಣ ವೇದಿಕೆಯ ನಗರ ಸಂಚಾಲಕ ಸಂತೋಷ ಬೆನಕನಳ್ಳಿ, ಚಂದ್ರಕಾಂತ ಕಾಳಗಿ, ವೈಷ್ಣವ ಬ್ಯಾನರ್ಜಿ, ಶಿವಾನಂದ ರೆಡ್ಡಿ, ವಿನೋದಕುಮಾರ್, ನಿಖೀಲ್ ಕುಲಕರ್ಣಿ, ಅಶೋಕ ಸಂಗೋಳಿಕರ್, ಚಂದ್ರಕಾಂತ ಕಲಖೋರೆ, ಗುರು ಟೆಂಗಳಿ, ನಾಗರಾಜ, ಗಣೇಶ ಕಾಪುಲಪುರೆ, ರಾಕೇಶ ಪಾಟೀಲ್, ಲೋಹಿತ ಪಾಟೀಲ್, ಚಂದ್ರಕಾಂತ, ಮಧುಕರ್ ನಾಯಕ, ವಿನೋದ, ಆನಂದ ತಾವರಗೇರಾ, ಸಂತೋಷ ಟಕಲಿಕರ್ ಸೇರಿದಂತೆ ಹಲವಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement