ಬಳ್ಳಾರಿ: ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಬಿ.ಆರ್. ಪ್ರಾಜೆಕ್ಟ್‌ನ ಮೀನುಗಾರಿಕಾ ತರಬೇತಿ ಕೇಂದ್ರದಲ್ಲಿ ಆ. 21ರಿಂದ ಒಳನಾಡು ಮೀನುಗಾರಿಕೆ ತರಬೇತಿ ನೀಡಲು ಅರ್ಹ ಗ್ರಾಮೀಣ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತರಬೇತಿ ಅವಧಿ 2 ತಿಂಗಳಾಗಿದ್ದು, ಈ ಅವಧಿಯಲ್ಲಿ ಆಯ್ಕೆಯಾದವರಿಗೆ ಮಾಹೆಯಾನ ರು. 1000 ಶಿಷ್ಯವೇತನ ನೀಡಲಾಗುವುದು. ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಾಣಿಕೆ, ಬಲೆ ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನು ಉತ್ಪಾದನೆ, ಪಾಲನೆ ಮತ್ತಿತರ ವಿಷಯ ಕುರಿತು ತರಬೇತಿ ನೀಡಲಾಗುವುದು. ಬಳ್ಳಾರಿ, ಬೀದರ್, ಗುಲ್ಬರ್ಗಾ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಹೊಂದಿದವರಾಗಿದ್ದು, 18 ರಿಂದ 40 ವರ್ಷ ವಯೋವಾನದೊಳಗಿರಬೇಕು. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು, ಮೀನುಗಾರರ ಸಹಕಾರ ಸಂಘ ಸದಸ್ಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಅಂಚೆ ಮೂಲಕ ಪಡೆಯಲಿಚ್ಛಿಸುವವರು ತಮ್ಮ ಕೋರಿಕೆ ಪತ್ರದೊಂದಿಗೆ ರು. 5 ಅಂಚೆ ಚೀಟಿ ಅಂಟಿಸಿದ ಸ್ವವಿಳಾಸವುಳ್ಳ 94 ಸೆ.ಮಿ. ಅಳತೆಯ ಲಕೋಟೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ಭದ್ರಾವತಿ ತಾಲೂಕು, ಶಿವಮೊಗ್ಗ- 577115 ಇವರಿಗೆ ಕಳುಹಿಸಿ ಪಡೆಯಬಹುದು. ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ, ತಮ್ಮ ದೂರವಾಣಿ ಸಂಖ್ಯೆ ತಪ್ಪದೆ ನಮೂದಿಸಿ ಆ. 20ರೊಳಗಾಗಿ ಇದೇ ಕಚೇರಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ-08282- 256252ಗೆ ಅಥವಾ ಜಿಲ್ಲಾ, ತಾಲೂಕು ಮಟ್ಟದ ಮೀನುಗಾರಿಕೆ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮೀಡಿಯಾ ಕ್ಲಬ್: ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಬಳ್ಳಾರಿ ಮೀಡಿಯಾ ಕ್ಲಬ್‌ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಮಧುಸೂದನ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಮಂಜುನಾಥ್, ಉಪಾಧ್ಯಕ್ಷರಾಗಿ ಕಿನ್ನೂರೇಶ್ವರ, ಮುರಳಿ, ಜಂಟಿ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ, ಖಜಾಂಚಿಯಾಗಿ ಸಿದ್ದಲಿಂಗಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಂಜುನಾಥ್ ಸಾಲಿ, ಬಸವರಾಜ್ ಹರನಹಳ್ಳಿ, ಸಿ. ಮಂಜುನಾಥ್, ಎಸ್. ನಾಗರಾಜ್, ಆಂಧ್ರಜ್ಯೋತಿ ರವಿ, ಎಂಸಿಎನ್ ಲಕ್ಷ್ಮಿರೆಡ್ಡಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೀಡಿಯಾ ಕ್ಲಬ್ ಸಲಹೆಗಾರರಾಗಿ ಎಂ. ಅಹಿರಾಜ್, ವೀರಭದ್ರಗೌಡ, ಸಿದ್ದಯ್ಯ ಹಿರೇಮಠ್ ಆಯ್ಕೆಯಾಗಿದ್ದಾರೆ.