'ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಅಗತ್ಯ'
ಜೇವರ್ಗಿ: ಗ್ರಾಮೀಣ ಪ್ರದೇಶದ ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರ್ತಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಅಗತ್ಯವಾಗಿದೆ ಎಂದು ಶಾಸಕ ಅಜಯಸಿಂಗ್ ಹೇಳಿದರು.
ಅವರು ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ ತಾಲೂಕಿನ ಮಾನಶಿವಣಗಿಯಲ್ಲಿ ಯಡ್ರಾಮಿ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಡಕೋಳದ ರುದ್ರಮುನಿ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಶಾಂತಗೌಡ ದುಮ್ಮದ್ರಿ ,ಅಮೃತರಾಯ ಗೌಡ ವಡಗೇರಿ, ತಾಪಂ ಮಾಜಿ ಉಪಾಧ್ಯಕ್ಷ ರೇವಣಸಿದ್ದಪ್ಪ ಗೌಡ ಕಮಾನಮಾನಿ, ವಿ.ಬಿ. ಹಿರೇಗೌಡ, ಚಂದ್ರಶೇಖರ್ ಪುರಾಣಿಕ, ಖಾಸೀಂ ಪಟೇಲ್ ಮುದಬಾಳ, ಎಸ್.ಎಂ. ಚೌದ್ರಿ, ಗುರಬಸಪ್ಪ ಚಾಂದಕವಟೆ, ಶೇಕ್ ಗುಡುಲಾಲ್, ಮರೆಪ್ಪ ಮೂಲಿಮನಿ, ನಾನಗೌಡ ಕೂಡಿ, ಗ್ರಾಪಂ ಅಧ್ಯಕ್ಷ ಕಸ್ತೂರಿ ಭಾಯಿ ಮಾಲಿಪಾಟೀಲ್, ಸಯ್ಯದ್ ಅಮ್ಜದ್, ಮಲ್ಲರಾವ್ ಕುಲಕರ್ಣಿ, ಡಿ.ಎಂ. ಪಾಟೀಲ್, ಚಾಂದಸಾಬ್, ಕರಬಸಯ್ಯ ಹಿರೇಮಠ, ಕೆಂಚಪ್ಪ ಡೊಣ್ಣಿ ಪಾಲ್ಗೊಂಡಿದ್ದರು.