ಕುರುಗೋಡು ವ್ಯಕ್ತಿ ಕಾಣೆ: ದೂರು
ಬಳ್ಳಾರಿ: ವ್ಯಕ್ತಿಯೋರ್ವ ಕಾಣೆಯಾಗಿರುವ ಘಟನೆ ತಾಲೂಕಿನ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಎಚ್. ನಾಗಿರೆಡ್ಡಿ (38) ಕಾಣೆಯಾದ ವ್ಯಕ್ತಿ. ಈತನು ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ಮರಳಿ ಮನೆಗೆ ಬಂದಿಲ್ಲ ಎಂದು ನಾಪತ್ತೆಯಾದವನ ಪತ್ನಿ ಧನಲಕ್ಷ್ಮಿ ಕುರುಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿ 5.5 ಅಡಿ ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಅರ್ಧ ತೋಳಿನ ಕಪ್ಪು ಅಂಗಿ ಮತ್ತು ಬಿಳಿ ಫ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಯಾರಿಗಾದರೂ ಸುಳಿವು ಸಿಕ್ಕಲ್ಲಿ ತಕ್ಷಣವೇ ಕುರುಗೋಡು ಪೊಲೀಸ್ ಠಾಣೆ ದೂ.ಸಂ 08393-263433, ಪಿಎಸ್ಐ ಮೊ 9480803051ಗೆ ಸಂಪರ್ಕಿಸುವಂತೆ ಠಾಣೆಯ ಪಿಎಸ್ಐ ಟಿ. ರಂಗಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.