ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕ್ರಿಕೆಟ್ ಟೂರ್ನಿಗೆ ಚಾಲನೆ

Lingaraj Badiger
Updated On : 12 Aug 2013, 11:19 am

ಹೊಸಪೇಟೆ: ಪ್ರತಿಯೊಬ್ಬರೂ ಕ್ರೀಡೆ, ವ್ಯಾಯಾಮ ಹಾಗೂ ಯೋಗದಲ್ಲಿ ತೊಡಗಿಕೊಂಡಾಗ ಮಾತ್ರ ಕ್ರಿಯಾಶೀಲ ವ್ಯಕ್ತಿಗಳಾಗಿ ಮತ್ತು ಆರೋಗ್ಯವಂತರಾಗಿ ಬೆಳೆಯಲು ಸಾಧ್ಯ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಹೇಳಿದರು. ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಸರ್ವೋ ಸೂರ್ಯೋದಯ ಕ್ರಿಕೆಟರ್ಸ್ ತಂಡದವರು ನಾಗರಪಂಚಮಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನ್‌ಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳು ಮಾನವನ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥರಾಗಲು ಕ್ರೀಡೆಗಳು ಸಹಕಾರಿಯಾಗಿವೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ಯುವಕರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ಸಾಗಿಸುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದರು. ಜಿ. ನಾಗಲಾಪುರ ತಾಪಂ ಸದಸ್ಯ ಎಚ್. ಲಕ್ಷ್ಮಣ, ರೋಗಣಿ ಹುಲುಗಪ್ಪ, ಸೋಮಪ್ಪ, ಕೆ. ದುರುಗಪ್ಪ, ದುರುಗಮ್ಮ, ಬ್ಯಾಲಕುಂದಿ ಶ್ರೀನಿವಾಸ್, ವಿ. ನಾಗರಾಜ, ದಳವಾಯಿ ಸೋಮಣ್ಣ, ಎರ್ರಿಸ್ವಾಮಿ. ಎಂ, ಹೇಮ್ಲಾನಾಯ್ಕ ಕಟ್ಟಿಮನಿ, ಗೊಲ್ಲರಹಳ್ಳಿ ವೆಂಕಟೇಶ್, ಜಿ. ಮಲ್ಲಪ್ಪ, ಬ್ಯಾಲಕುಂದಿ ರಮೇಶ್, ಡಿ. ಭೀಮಪ್ಪ, ಅಡವಿ ಬಸಪ್ಪ, ತುಂಬಪ್ಪ, ರೆಡ್ಡಿಮಾಬು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement