ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದ್ವಾದಶ ಜ್ಯೋತಿರ್ಲಿಂಗಗಳ ಬೃಹತ್ ಮೆರವಣಿಗೆ

Lingaraj Badiger
Updated On : 12 Aug 2013, 11:18 am

ಕನ್ನಡಪ್ರಭ ವಾರ್ತೆ, ಕಂಪ್ಲಿ, ಆ. 11
ಇಲ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಇಷ್ಟಲಿಂಗ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಬೃಹತ್ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶನಿವಾರ ಸುಮಂಗಲೆಯರ ಕಳಸ ಕನ್ನಡಿಯೊಂದಿಗೆ, ಸಕಲ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಆ. 12ರಂದು ನಡೆಯಲಿರುವ ಶ್ರೀ ಶಿವ ದೇವಸ್ಥಾನ ಉದ್ಘಾಟನೆ, ದ್ವಾದಶ ಜ್ಯೋತಿರ್ಲಿಂಗಗಳ ಪ್ರಾಣ ಪ್ರತಿಷ್ಠಾಪನೆ, ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ 1008 ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಅಂಗವಾಗಿ ಪೂರ್ವಭಾವಿಯಾಗಿ ಇಷ್ಟಲಿಂಗ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಬೃಹತ್ ಮೆರವಣಿಗೆ ನಡೆಸಲಾಯಿತು.
ಹೆಬ್ಬಾಳು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯವನ್ನು ಗ್ರಾಮದಲ್ಲಿ ಸತತ 3 ದಿನಗಳ ಕಾಲ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತರ ಮಠದ ವಾಮದೇವ ಮಹಾಂತ ಸ್ವಾಮೀಜಿ ಹಾಗೂ ದೇವಸ್ಥಾನ ನಿರ್ಮಿಸಿ ಮತ್ತು ಮೂರ್ತಿಗಳ ಪ್ರತಿಷ್ಠಾಪನೆ ಮಾಡುತ್ತಿರುವ ಹೊಸಪೇಟೆ ತಾಲೂಕು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಟ್ಟೆ ಉಮಾಪತಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಪಿಐ ಆರ್.ಹನುಮಂತಪ್ಪ, ಸಾಂಗತ್ರಯ ಸಂಸ್ಕೃತ, ಜ್ಯೋತಿಷ್ಯ, ವೈದಿಕ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿಗಳು, ಕಂಪ್ಲಿ ಕಲ್ಯಾಣ ಚೌಕಿ ಮಠದ ಬಸವರಾಜಶಾಸ್ತ್ರಿಗಳು ಉಪಸ್ಥಿತರಿದ್ದರು.
ಬಂಡೆ ಬಸವೇಶ್ವರ ಮತ್ತು ನೀಲಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಶ್ರೀಶಿವ ದೇವಾಲಯಕ್ಕೆ ತಲುಪಿತು. ನಂತರ ನೂತನ ಶಿಲಾಮೂರ್ತಿಗಳನ್ನು ಆಗಮೋಕ್ತ ವಿಧಿಯಿಂದ ಜಲಾದಿವಾಸ ಮಾಡಿ, ಮಹಾಮಂಗಳಾರತಿ ನೆರವೇರಿಸಲಾಯಿತು.
ಭವ್ಯ ಮೆರವಣಿಗೆಯಲ್ಲಿ ಮುಖಂಡರಾದ ಟಿ.ಸೋಮಶೇಖರಪ್ಪ, ಕಟ್ಟೆ ದುರುಗಪ್ಪ, ಎಚ್.ಎಂ.ಬಸವರಾಜಸ್ವಾಮಿ, ಕೆ. ಹೇಮಯ್ಯಸ್ವಾಮಿ, ಬಿ. ಸದಾಶಿವಪ್ಪ, ಅಯೋದಿ ವೆಂಕಟೇಶ, ಸಾದರ ತಿಮ್ಮಪ್ಪ, ತೆಂಗಿನಕಾಯಿ ರುದ್ರಪ್ಪ, ಟಿ.ಸೋಮನಾಥ, ಜೆ.ಜಿ. ಬಸವರಾಜ, ಟಿ.ಶಂಕರ, ಕೆ.ಮನೋಹರ, ಕಟ್ಟೆ ಮಾರೆಪ್ಪ, ಕಟ್ಟೆ ಮಹಾದೇವ, ಎಚ್.ಎಂ. ಶರಣಯ್ಯಸ್ವಾಮಿ, ಕಟ್ಟೆ ಮಂಜುನಾಥ, ಎ.ತಾಯಣ್ಣ, ಕಟ್ಟೆ ಸುನಿಲ್‌ಕುಮಾರ್, ಆರ್. ಸೋಮಶೇಖರಗೌಡ, ಬಿ.ಜಗದೀಶ, ಕಟ್ಟೆ ವಿಜಯಮಹಾಂತೇಶ, ಜಿ.ಕೆ.ರಾಚಪ್ಪ, ಕಟ್ಟೆ ಈಶಣ್ಣ, ಜಿ.ಬಿ. ರಾಚಪ್ಪ, ಕಟ್ಟೆ ಗುರುರಾಜ, ಗೌಳೇರು ವೀರಭದ್ರಪ್ಪ, ವಾರದ ಸಾಂತಪ್ಪ, ಕಟ್ಟೆ ಶಂಕರ, ಗೌಳೇರು ಪಂಪಣ್ಣ, ಕಟ್ಟೆ ರಾಘವೇಂದ್ರ, ಗೌಳೇರು ಫಕ್ಕೀರಪ್ಪ, ಗೌಳೇರು ದೊಡ್ಡರುದ್ರಪ್ಪ, ಟಿ. ವೀರಶೇಖರಯ್ಯಸ್ವಾಮಿ, ಗೌಳೇರು ವೆಂಕಟೇಶ ಹಾಗೂ ವಿವಿಧ ಸಮಾಜದ ಬಾಂಧವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement