ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ: ಅಶ್ವಿನಿ ಅಂಗಡಿಗೆ ಸನ್ಮಾನ

Lingaraj Badiger
Updated On : 13 Aug 2013, 10:53 am

ಬಳ್ಳಾರಿ: ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ರಾಘವ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯಿಂದ ಗಾರ್ಡನ್ ಬ್ರೌನ್ ಪ್ರಶಸ್ತಿ ಪಡೆದ ಕು. ಅಶ್ವಿನಿ ಅಂಗಡಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ರಮೇಶಗೌಡ ಪಾಟೀಲ ಮಾತನಾಡಿ, ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿಯ ಕುಮಾರಿ ಅಶ್ವಿನಿ ಅಂಗಡಿ ಅವರು ಗಾರ್ಡನ್ ಬ್ರೌನ್ ಪ್ರಶಸ್ತಿ ಪಡೆದ ಏಕೈಕ ಭಾರತೀಯಳಾಗಿದ್ದಾಳೆ. ಇದು ನಮ್ಮ ಜಿಲ್ಲೆಗಷ್ಟೇ ಅಲ್ಲ ಇಡೀ ನಮ್ಮ ದೇಶಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ. ಚನ್ನಪ್ಪ, ಉಪಾಧ್ಯಕ್ಷ ರಾಮಾಂಜನೇಯಲು, ಖಜಾಂಚಿ ಪಿ. ಧನಂಜಯ, ಸದಸ್ಯರಾದ ಎನ್. ನಾಗರಾಜ, ಎ. ಲಕ್ಷ್ಮಿನಾರಾಯಣ, ಕೆ. ಸುರೇಂದ್ರಬಾಬು, ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಶೀಲಾ ಬ್ರಹ್ಮಯ್ಯ, ಉಪಾಧ್ಯಕ್ಷ ಕೆ. ಕೋಟೇಶ್ವರ ರಾವು, ಖಜಾಂಚಿ ಅಲ್ಲಂ ದೊಡ್ಡಪ್ಪ ಹಾಗೂ ಕು. ಅಶ್ವಿನಿ ಕುಟುಂಬದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement